ಧಮ೯ಸ್ಥಳದಲ್ಲಿ 24ನೇ ವರ್ಷದ   ಭಜನಾ ತರಬೇತಿ ಕಮ್ಮಟದ ಸಮಾರೋಪ – ಭಜನೋತ್ಸವ , ಭಜನಾ ಪರಿಷತ್ ನ ಸಾಧಕರಿಗೆ ಸನ್ಮಾನ

ಧರ್ಮಸ್ಥಳ: 24ನೇ ವರ್ಷದ  ಭಜನೋತ್ಸವ ಹಾಗೂ ಭಜನಾ ತರಬೇತಿ ಕಮ್ಮಟದ ಸಮಾರೋಪ ಸಮಾರಂಭ ಸೆ.23 ರಂದು ಶ್ರೀ ಕ್ಷೇತ್ರ ಧರ್ಮಸ್ಥಳದ ಅಮೃತವರ್ಷಿಣಿ ಸಭಾಭವನದಲ್ಲಿ ಜರುಗಿತು.

ಉಡುಪಿ ಪೇಜಾವರ ಶ್ರೀ ಅಧೋಕ್ಷಜ ಮಠದ ಶ್ರೀ ಶ್ರೀ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿಯವರು ಆಶೀರ್ವಚನ ನೀಡಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ|| ಡಿ ವೀರೇಂದ್ರ ಹೆಗ್ಗಡೆಯವರು ವಹಿಸಿದ್ದರು.

ವೇದಿಕೆಯಲ್ಲಿ ಶ್ರೀ ಧಾಮ ಮಾಣಿಲದ ಮಾಣಿಲ ಸೇವಾ ಪ್ರತಿಷ್ಠಾನದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ, ಬೆಂಗಳೂರು ಚಲನಚಿತ್ರ ಸಂಗೀತ ನಿರ್ದೇಶಕರು ವಿ. ಶ್ರೀಧರ್ ಸಂಭ್ರಮ್, ಇಸ್ಕಾನ್ ನ ಶ್ರೀರಾಮಚರಣದಾಸ ಸ್ವಾಮೀಜಿ ಉಪಸ್ಥಿತರಿದ್ದರು.

ಸನ್ಮಾನ ಕಾರ್ಯಕ್ರಮ:

ಈ ಸಂದರ್ಭದಲ್ಲಿ ಭಜನಾ ಪರಿಷತ್ ನ ಸಾಧಕರಿಗೆ ವಿಮಾ ವಿಭಾಗದ ಪ್ರಾದೇಶಿಕ ನಿರ್ದೇಶಕರು ಪುರುಷೋತ್ತಮ ಇವರು ಸನ್ಮಾನಿಸಿದರು ಹಾಗೂ ಪೇಜಾವರ ಶ್ರೀಗಳಿಗೆ ಕ್ಷೇತ್ರದ ವತಿಯಿಂದ ಗೌರವಾರ್ಪನೆಯನ್ನು ಮಾಡಲಾಯಿತು. ವಾಸುರೆಡ್ಡಿ ಮತ್ತು ಮನೆಯವರು ಬೆಂಗಳೂರು ಹಾಗೂ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಭಜನಾ ಪರಿಷತ್ ವತಿಯಿಂದ ಡಾ|| ಡಿ ವೀರೆಂದ್ರ ಹೆಗ್ಗಡೆಯವರಿಗೆ ಮತ್ತು ಮಾತೃಶ್ರೀ ಡಾ|| ಹೇಮಾವತಿ ವೀ.ಹೆಗ್ಗಡೆಯವರಿಗೆ ಸನ್ಮಾನವನ್ನು ಮಾಡಲಾಯಿತು.

ಕಾರ್ಯಕ್ರಮದಲ್ಲಿ ಮಾತೃಶ್ರೀ ಡಾ|| ಹೇಮಾವತಿ ಯವರ ಪರಿಕಲ್ಪನೆಯಲ್ಲಿ ವಿದೂಷಿ ಕು| ಚೈತ್ರ ಮತ್ತು ತಂಡದಿಂದ ದೃಶ್ಯ ರೂಪಕ ನಡೆಯಿತು.
ಭಜನಾ ಪರಿಷತ್ ಅಧ್ಯಕ್ಷ ಬಾಲಕೃಷ್ಣ ಪಂಜ, ಪ್ರದೀಪ್ ಕುಮಾರ್ ಕಲ್ಕೂರ ಮೊದಲಾದವರು ಉಪಸ್ಥಿತರಿದ್ದರು.

ಶ್ರೀ.ಧ.ಮಂ ಭಜನಾ ಕಮ್ಮಟದ ಸಂಚಾಲಕ ಸುಬ್ರಹ್ಮಣ್ಯ ಪ್ರಸಾದ್ ಸ್ವಾಗತಿಸಿದರು. ಭಜನಾ ತರಬೇತಿ ಕಮ್ಮಟದ ಕೋಶಾಧಿಕಾರಿ  ಧರ್ಣಪ್ಪ ಡಿ ಧನ್ಯವಾದಗೈದರು. ಶ್ರೀನಿವಾಸ್ ರಾವ್ ಮತ್ತು ದಿನರಾಜ್ ಶೆಟ್ಟಿ ನಿರೂಪಿಸಿದರು.

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.