Site icon Suddi Belthangady

ಎರುಕಡಪ್ಪು ಅಂಗನವಾಡಿ ಕೇಂದ್ರದಲ್ಲಿ ಪೋಷಣಾ ಅಭಿಯಾನ ಕಾರ್ಯಕ್ರಮ


ಕಳಿಯ : ಇಲ್ಲಿಯ ಎರುಕಡಪ್ಪು ಅಂಗನವಾಡಿ ಕೇಂದ್ರ,ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಶಿಶು ಅಭಿವೃದ್ಧಿ ಯೋಜನೆ ಮತ್ತು ಪ್ರಾಥಮಿಕ ಆರೋಗ್ಯ ಕೇಂದ್ರ ಪಡಂಗಡಿ ಜಂಟಿ ಆಶ್ರಯದಲ್ಲಿ ಘೋಷಣಾ ಅಭಿಯಾನ ಮತ್ತು ಉಚಿತ ಆರೋಗ್ಯ ತಪಾಸಣೆ ಕಾರ್ಯಕ್ರಮ ಸೆ.22 ರಂದು ಅಂಗನವಾಡಿ ಕೇಂದ್ರದಲ್ಲಿ ನಡೆಯಿತು.

ಪ್ರಾಥಮಿಕ ಆರೋಗ್ಯ ಸುರಕ್ಷ ಅಧಿಕಾರಿ ಶಕುಂತಲಾ ಮಾತನಾಡುತ್ತಾ ವಿವಿಧ ಬಗೆಯ ಗುಣಮಟ್ಟದ ಸೋಪ್ಪು,ತರಕಾರಿ ಮತ್ತು ಹಣ್ಣು ಹಂಪಲು ಸೇವಿಸುವುದರಿಂದ ಉತ್ತಮ ಆರೋಗ್ಯ ಸಾಧ್ಯ ಎಂದು ಹೇಳಿದರು.

ಅಂಗನವಾಡಿ ಬಾಲ ವಿಕಾಸ ಸಮಿತಿ ಅಧ್ಯಕ್ಷರಾದ ಭಾರತಿ ಬೇಬಿ ಗೌಡ ಪಿ.ಜೆ ದೀಪ ಪ್ರಜ್ವಲಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.ಕಳಿಯ ಗ್ರಾಮ ಪಂ.ಸದಸ್ಯರಾದ ಮರೀಟಾ ಪಿಂಟೋ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಸಮುದಾಯದ ಅರೋಗ್ಯ ಅಧಿಕಾರಿ ನಾಗರಾಜ ಕೆ.ಎಸ್.ಮತ್ತು ಕಳಿಯ ಗ್ರಾಮ ಪಂಚಾಯತು ಅಧ್ಯಕ್ಷೆ ಹಾಗೂ ಆಶಾ ಕಾರ್ಯಕರ್ತೆ ಸುಭಾಷಿಣಿ ಜನಾರ್ದನ ಗೌಡ ಮಕ್ಕಳ ಹಾಗೂ ಸಾರ್ವಜನಿಕ ಆರೋಗ್ಯ ತಪಾಸಣೆ ನಡೆಸಿದರು. ಮಕ್ಕಳ ಪೋಷಕರು ಮನೆಯಲ್ಲಿ ತಯಾರಿಸಿ ತಂದಿರುವ ವಿವಿಧ ಬಗೆಯ ತಿಂಡಿ, ತಿನಿಸುಗಳನ್ನು ಸಾಮೂಹಿಕವಾಗಿ ಸೇವಿಸಿದರು.ಅಂಗನವಾಡಿ ಕಾರ್ಯಕರ್ತೆ ಗುಣವತಿ ಕೆ.ಎನ್.ಸ್ವಾಗತಿಸಿ,ಧನ್ಯವಾದವಿತ್ತರು.

Exit mobile version