ಬೆಳ್ತಂಗಡಿ: ಚಕ್ರ ಎಸೆತ, ಸುಷ್ಮಾ ಬಿ ಪೂಜಾರಿಯವರಿಗೆ ರಾಷ್ಟ್ರ ಮಟ್ಟದಲ್ಲಿ ಪ್ರಶಸ್ತಿ

ಬೆಳ್ತಂಗಡಿ: ಆಂಧ್ರಪ್ರದೇಶದ ಗುಂಟೂರಿನ ಸ್ಟೇಡಿಯಂನಲ್ಲಿ ಜರುಗಿದ ರಾಷ್ಟ್ರಮಟ್ಟದ 33 ನೇ ದಕ್ಷಿಣ ವಲಯ ಜೂನಿಯರ್ ಅಥ್ಲೆಟಿಕ್ಸ್ ಚಾಂಪಿಯನ್ ಶಿಪ್ ನ ಡಿಸ್ಕಸ್ ಥ್ರೋ ಸ್ಪರ್ದೆಯಲ್ಲಿ ಮೂಡಬಿದ್ರೆ ಆಳ್ವಾಸ್ ಕಾಲೇಜಿನ ಪದವಿ ವಿದ್ಯಾರ್ಥಿನಿ ಸುಷ್ಮಾ ಬಿ ಪೂಜಾರಿ ಯೈಕುರಿ ಚತುರ್ಥ ಸ್ಥಾನ ಪಡೆದು ರಾಷ್ಟ್ರ ಮಟ್ಟದಲ್ಲಿ ಪ್ರಶಸ್ತಿ ಪಡೆದಿದ್ದಾರೆ.

ಕಳೆದ ಹಲವು ವರ್ಷಗಳಿಂದ ಇವರು ಡಿಸ್ಕಸ್ ಥ್ರೋ ಸ್ಪರ್ದೇಯಲ್ಕಿ 3 ಬಾರಿ ರಾಷ್ಟ್ರ ಮಟ್ಟಿಕ್ಕೆ, 12 ಬಾರಿ ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿ ಹಲವಾರು ಪ್ರಶಸ್ತಿ ಪಡೆದಿದ್ದಾರೆ.

ಇವರು ನಾಲ್ಕೂರು ಗ್ರಾಮದ ನಿವಾಸಿ, ಬಳಂಜ ಗ್ರಾ.ಪಂ‌ ಸದಸ್ಯ ಬಾಲಕೃಷ್ಣ ಪೂಜಾರಿ ಮತ್ತು ಮಾಲಾತಿ ಬಿ ಪೂಜಾರಿ ಯೈಕುರಿ ದಂಪತಿ ಪುತ್ರಿ.

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.