ಬೆಳ್ತಂಗಡಿ: ಟೈಲರ್ ಸಹಕಾರ ಸಂಘದ ವಾರ್ಷಿಕ ಸಾಮಾನ್ಯ ಸಭೆ: ಸದಸ್ಯರಿಗೆ ಶೇ. 11 ಡಿವಿಡೆಂಡ್ ಘೋಷಣೆ

0

ಬೆಳ್ತಂಗಡಿ: ಟೈಲರ್‌ ಸಹಕಾರ ಸಂಘದ 2021-22ನೇ ಸಾಲಿನ ಸರ್ವ ಸದಸ್ಯರ ವಾರ್ಷಿಕ ಸಾಮಾನ್ಯ ಸಭೆಯು ಅಂಬೇಡ್ಕರ್ ಭವನದಲ್ಲಿ ಸೆ. 20ರಂದು ಜರಗಿತು. ಸಂಘದ ಅಧ್ಯಕ್ಷ ವಲೇರಿಯನ್ ಮಾತಾಡಿ ರಾಜ್ಯದಲ್ಲಿ ಪ್ರಥಮವೆನಿಸಿದ ಈ ಸಹಕಾರ ಸಂಘವು ಮುಂದಿನ ದಿನಗಳಲ್ಲಿ ಹೆಮ್ಮರವಾಗಿ ಬೆಳೆದು ಜಿಲ್ಲೆ ರಾಜ್ಯಮಟ್ಟದಲ್ಲಿ ಗ್ರಾಹಕರಿಗೆ ಉತ್ತಮ ರೀತಿಯ ಸೇವೆಯನ್ನು ನೀಡಲಿ ಎಂದು ಹಾರೈಸಿದರು. ಆರು ವರ್ಷಗಳ ಅವಧಿ ಪೂರ್ಣಗೊಳಿಸುವ ಮೊದಲೇ 14 ಕೋಟಿ ಠೇವಣಿ ಸಂಗ್ರಹಿಸಿ 808 ಸದಸ್ಯರನ್ನು ಒಳಗೊಂಡು ರೂ. 609500 ಪಾಲು ಬಂಡವಾಳ ಹೊಂದಿರುತ್ತದೆ. ರೂ. ಎಂಟು ಕೋಟಿ 61 ಲಕ್ಷ ಸಾಲ ವಿತರಿಸಲಾಗಿದೆ. ಲೆಕ್ಕಪರಿಶೋಧನೆಯಲ್ಲಿ ಸತತ ಎ ತರಗತಿ ವರ್ಗೀಕರಣ ಪಡೆದಿದೆ. ಆರ್ಥಿಕ ವರ್ಷದಲ್ಲಿ ಒಟ್ಟು ರೂಪಾಯಿ 38 ಕೋಟಿಗೂ ಮಿಕ್ಕಿದ ವ್ಯವಹಾರ ನಡೆಸಿ ಮಾರ್ಚ್ ಅಂತ್ಯಕ್ಕೆ ರೂ. 530468 ನಿವ್ವಳ ಲಾಭಗಳಿಸಿದ್ದು ಸದಸ್ಯರಿಗೆ ಶೇಕಡ 11% ಡಿವಿಡೆಂಟ್ ವಿಂಗಡನೆ ಮಾಡಲಾಯಿತು.

ಸಂಘದ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಜೋಯಲ್ ಪ್ರದೀಪ್‌ ಡಿಸೋಜಾ ವಾರ್ಷಿಕ ವರದಿ ಮಂಡಿಸಿದರು. ಉಪಾಧ್ಯಕ್ಷ ಕೆ ಕುಶಾಲಪ್ಪ ಗೌಡ ಇವರು ಸ್ವಾಗತಿಸಿದರು. ನಿರ್ದೇಶಕರಾದ ಶಾಂಭವಿ ಬಂಗೇರ  ವಂದಿಸಿದರು.

ನಿರ್ದೇಶಕರಾದ ವಸಂತ ಪೂಜಾರಿ ಕಾರ್ಯಕ್ರಮವನ್ನು ನಿರೂಪಿಸಿದರು ಆಡಳಿತ ಮಂಡಳಿಯ ಸದಸ್ಯರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here