Site icon Suddi Belthangady

ಕುವೆಟ್ಟು ನಿವಾಸಿ ಮಿಲ್ರೆಡ್ ವಹಿಲೆಟ್ ತೌರೊ ಹೃದಯಾಘಾತದಿಂದ ನಿಧನ

ಗುರುವಾಯನಕೆರೆ : ಕುವೆಟ್ಟು ಗ್ರಾಮದ ದಿ. ಜಾನ್ ಬ್ಯಾಪ್ಟಿಸ್ಟ್ ತೌರೊ ಮತ್ತು ನಿವೃತ್ತ ಶಿಕ್ಷಕಿ ದಿ. ಶ್ರೀಮತಿ ಪೌಲಿನ್ ಲೋಬೊ ರವರ ಪುತ್ರಿ ಅವಿವಾಹಿತೆ ಮಿಲ್ರೆಡ್ ವಹಿಲೆಟ್ ತೌರೊ ಸೆ.20ರಂದು ಹೃದಯಾಘಾತದಿಂದ ನಿಧನರಾಗಿದ್ದಾರೆ.

ಮೃತರು ಕಳೆದ ಫೆಬ್ರವರಿ ತಿಂಗಳಲ್ಲಿ ಬೆಂಗಳೂರಿನಲ್ಲಿ ರಸ್ತೆ ದಾಟುವಾಗ ಅಪಘಾತಗೊಳಗಾಗಿ ನಂತರ ಮನೆಯಲ್ಲಿಯೆ ಚಿಕಿತ್ಸೆ ಪಡೆಯುತ್ತಿದ್ದರು. ಇಂದು ಬೆಳಿಗ್ಗೆ ಚಿಕಿತ್ಸೆಗಾಗಿ ಮಂಗಳೂರು ಹೊರಟ ಸಂದರ್ಭದಲ್ಲಿ ಹೃದಯಘಾತಕ್ಕೊಳಗಾಗಿ ನಿಧನ ಹೊಂದಿದರು.

ಇವರು ಬೆಂಗಳೂರು ಸಂಭ್ರಮ ಎಂಜಿನಿಯರ್ ಕಾಲೇಜಿನಲ್ಲಿ ಚೇರ್ ಮ್ಯನ್ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸುತ್ತಿದ್ದರು. ಮೃತರು ಸಹೋದರ ನಿವೃತ್ತ ಪಂಚಾಯತ್ ಅಭಿವೃದ್ಧಿ ಅಧಿಕಾರಿ ರೊನಾಲ್ಡ್ ತೌರೊ, ಸಹೋದರಿ ನಿವೃತ್ತ ಶಿಕ್ಷಕಿ ಡೆಸಿ ತೌರೊ ಹಾಗೂ ಬಂಧು ವರ್ಗದವರನ್ನು ಅಗಲಿದ್ದಾರೆ.

Exit mobile version