ಕೊಕ್ಕಡ: ಇಲ್ಲಿನ ನೆಕ್ಕರ್ಲ ನಿವಾಸಿ ಶ್ರೀಕರ ಮರಾಠೆ (61ವ.) ಸೆ.19ರಂದು ಸಂಜೆ ಹೃದಯಾಘಾತದಿಂದ ನಿಧನರಾದರು.
ಶ್ರೀ ಕ್ಷೇತ್ರ ಸೌತಡ್ಕದಲ್ಲಿ ಆರು ವರ್ಷಗಳ ಕಾಲ ಪ್ರಧಾನ ಬಾಣಸಿಗರಾಗಿ ಸೇವೆ ಸಲ್ಲಿಸಿ, 4 ವರ್ಷಗಳಿಂದ ಅಲ್ಲಿಯೇ ಅಡುಗೆ ಸಹಾಯಕರಾಗಿ ಕಾರ್ಯನಿರ್ವಹಿಸುತ್ತಿದ್ದು, ಇಂದು ಕೂಡ ಶ್ರೀ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ್ದರು.
ಮೃತರು ಪತ್ನಿ ಹಾಗೂ ಇಬ್ಬರು ಪುತ್ರರನ್ನು ಅಗಲಿದ್ದಾರೆ.