ಹೋಲಿ ರಿಡೀಮರ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಹಿಂದಿ ದಿವಸ

0

ಬೆಳ್ತಂಗಡಿ: ಹೋಲಿ ರಿಡೀಮರ್ ಆಂಗ್ಲ ಮಾಧ್ಯಮ ಶಾಲೆ ಬೆಳ್ತಂಗಡಿಯಲ್ಲಿ ಸೆ. 19 ರಂದು ಹಿಂದಿ ದಿವಸವನ್ನು ಆಚರಿಸಲಾಯಿತು.

ಭಾರತದಲ್ಲಿ ಹಿಂದಿ ಭಾಷೆ ಪ್ರಧಾನ ಭಾಷೆಯಾಗಿದ್ದು, ಎಲ್ಲರೂ ಈ ಭಾಷೆಯನ್ನು ಆಸಕ್ತಿಯಿಂದ ಕಲಿಯಬೇಕೆಂದು ಕಾರ್ಯಕ್ರಮದ ಮುಖ್ಯ ಅತಿಥಿಯಾದ ಅಳದಂಗಡಿ ಸೈಂಟ್ ಪೀಟರ್ ಕ್ಲೇವರ್ ಆಂಗ್ಲ ಮಾಧ್ಯಮ ಶಾಲೆಯ ಸಂಚಾಲಕರಾದ ವಂ.ಫಾ. ಎಲಿಯಾಸ್ ಡಿಸೋಜಾ ನುಡಿದು ಶುಭ ಹಾರೈಸಿದರು.

ಶಾಲಾ ಮುಖ್ಯೋಪಾಧ್ಯಾಯರಾದ ವಂ ಫಾ ಕ್ಲಿಫರ್ಡ್ ಪಿಂಟೋರವರು ಮುಖ್ಯ ಅತಿಥಿಯವರನ್ನು ಪರಿಚಯಿಸಿ, ಹಿಂದಿ ಸಂಘವು ಪ್ರಸ್ತುತ ಪಡಿಸಿದ ಸುಂದರ ಕಾರ್ಯಕ್ರಮವನ್ನು ಶ್ಲಾಘಿಸಿದರು.

ಸಹಶಿಕ್ಷಕಿ ಶ್ರೀಮತಿ ಲೋನ ಲೋಬೊ ಹಿಂದಿ ದಿನದ ಕುರಿತು ಮಾತನಾಡಿದರು. ವಿದ್ಯಾರ್ಥಿಗಳು ಅಮ್ಮನ ಮಹತ್ವವನ್ನು ಸಾರುವ ರೂಪಕವನ್ನು ಪ್ರದರ್ಶಿಸಿದರು. ನೃತ್ಯಗಳ ಮೂಲಕ ಹಿಂದಿ ಭಾಷೆಯ ವೈಶಿಷ್ಟ್ಯ, ಹಿರಿಮೆಯನ್ನು ಸಾರಿದರು. ಪುಟಾಣಿ ಮಕ್ಕಳು ನೃತ್ಯದ ಮೂಲಕ ಎಲ್ಲರನ್ನೂ ಸ್ವಾಗತಿಸಿದರು. ವಿದ್ಯಾರ್ಥಿಗಳಾದ ರಿತಿಕ ವಂದಿಸಿ, ಜಸೀರಾ ಮತ್ತು ಆಸ್ಟಿನ್ ಕಾರ್ಯಕ್ರಮ ನಿರೂಪಿಸಿದರು. ಸಹಶಿಕ್ಷಕಿಯರಾದ ಶ್ರೀಮತಿ ಲೋನ ಲೋಬೊ ಹಾಗೂ ಶ್ರೀಮತಿ ಪ್ರಭಾ ಗೌಡ ರವರು ಸಹಕರಿಸಿದರು.

LEAVE A REPLY

Please enter your comment!
Please enter your name here