Site icon Suddi Belthangady

ಅಂತರಾಷ್ಟ್ರೀಯ ಏಷ್ಯನ್ ನೆಟ್ ಬಾಲ್ ಕ್ರೀಡಾಕೂಟದಲ್ಲಿ ಭಾರತೀಯ ತಂಡದ ಉಪನಾಯಕಿಯಾಗಿ ಉಜಿರೆಯ ಬಿ.ಸಿ.ಮೇಘನಾ ಆಯ್ಕೆ

ಉಜಿರೆ: ಸಿಂಗಾಪುರದಲ್ಲಿ ಸೆ.3 ರಿಂದ 11ರವರೆಗೆ ನಡೆದ ಅಂತರಾಷ್ಟ್ರೀಯ ಏಷ್ಯನ್ ನೆಟ್ ಬಾಲ್ ಪಂದ್ಯಾವಳಿಯಲ್ಲಿ ಉಜಿರೆಯ ವಿದ್ಯಾರ್ಥಿನಿ ಮೇಘನಾ ಪೂಜಾರಿ ಉಪನಾಯಕಿಯಾಗಿರುವ ಭಾರತದ ತಂಡ 8ನೇ ಸ್ಥಾನ ಪಡೆದಿದೆ.

ಉಪನಾಯಕಿಯಾಗಿ ಭಾರತ ತಂಡ ವನ್ನು ಮುನ್ನಡೆಸಿ ದೇಶಕ್ಕೆ 8ನೇ ಸ್ಥಾನ ಗಳಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ ಮೇಘನಾ ಪೂಜಾರಿ ಉಜಹಿರೆ ಶ್ರೀ ಧರ್ಮಸ್ಥಳ ಮಂಜುನಾಥ ಕಾಲೇಜಿನ ಎಂಕಾಂ ವಿದ್ಯಾರ್ಥಿ. ಕರ್ನಾಟಕ ತಂಡದಿಂದ ತೆಲಂಗಾಣ, ತಮಿಳುನಾಡು, ಹರ್ಯಾಣ, ಹಿಮಾಚಲ್ ಪ್ರದೇಶ್, ಛತ್ತೀಸ್ ಘಡ್ ನಲ್ಲಿ ನಡೆದ ನೆಟ್ ಬಾಲ್ ಪಂದ್ಯಾಟದಲ್ಲಿ ಭಾಗವಹಿಸಿ ಎರಡು ಕಂಚಿನ ಪದಕವನ್ನು ಪಡೆದುಕೊಂಡಿದ್ದಾರೆ.

ಇವರು ಗೋಣಿಕೊಪ್ಪ ನಿವಾಸಿ ಬಿ.ಎ ಚನ್ನಪ್ಪ ಪೂಜಾರಿ ಬಿ.ಸಿ ನಳಿನಾಕ್ಷಿ ದಂಪತಿಯ ಪುತ್ರಿ

Exit mobile version