ಎಕ್ಸೆಲ್ ನ ಮೊದಲ ಬ್ಯಾಚ್ ನ ವಿದ್ಯಾರ್ಥಿ ಆಗ್ನೇಯ ಐ ಐ ಟಿ ಗೆ ಆಯ್ಕೆ

0


ಗುರುವಾಯನಕೆರೆ:  ಎಕ್ಸೆಲ್ ಪದವಿ ಪೂರ್ವ ಕಾಲೇಜಿನ ಪ್ರಥಮ ಬ್ಯಾಚ್ ನ ವಿದ್ಯಾರ್ಥಿ ಆಗ್ನೇಯ ಡಿ ಎ, ಜೆ ಇ ಇ ಅಡ್ವಾನ್ಸ್ ಪರೀಕ್ಷೆಯಲ್ಲಿ ಅರ್ಹತೆ ಪಡೆದು ಐ ಐ ಟಿ ಯಲ್ಲಿ ಉನ್ನತ ವ್ಯಾಸಂಗ ನಡೆಸಲು ಆಯ್ಕೆಯಾಗಿದ್ದಾರೆ.

ದೇಶದ 9.5 ಲಕ್ಷ ವಿಜ್ಞಾನ ವಿದ್ಯಾರ್ಥಿಗಳು ಜೆ ಇ ಇ ಪರೀಕ್ಷೆ ಬರೆದರೂ, ಆಯ್ಕೆಯಾದವರು ಕೇವಲ 1.5 ಲಕ್ಷ ವಿದ್ಯಾರ್ಥಿಗಳು ಮಾತ್ರ ಅತ್ಯುತ್ತಮ ತರಬೇತಿ ಪಡೆದ ವಿದ್ಯಾರ್ಥಿಗಳು ಮಾತ್ರ ಐ ಐ ಟಿಯಲ್ಲಿ ಸ್ಥಾನ ಪಡೆಯಲು ಸಾಧ್ಯ. ಆಗ್ನೇಯ ಅವರು ಎಕ್ಸೆಲ್ ಪದವಿ ಪೂರ್ವ ಕಾಲೇಜಿನಲ್ಲಿ ಅಭ್ಯಾಸ ನಡೆಸಿ, ದ್ವಿತೀಯ ಪಿಯುಸಿ ಯಲ್ಲಿ ರಾಜ್ಯಕ್ಕೆ 4 ನೆ ಯ ಸ್ಥಾನ ಪಡೆದಿದ್ದರು. ಇದೀಗ ಐಐಟಿಗೆ ಪ್ರವೇಶಾತಿ ಪಡೆಯುವ ಮೂಲಕ ದೇಶದ ಉನ್ನತ ತಾಂತ್ರಿಕ ಮಹಾವಿದ್ಯಾಲಯ ದಲ್ಲಿ ಓದುವ ಅವಕಾಶವನ್ನು ಗಳಿಸಿ ಕೊಂಡಿದ್ದಾರೆ.

ಕೇರಳದ ತಿರುವನಂತಪುರದ ಐ ಐ ಟಿಯ ಲ್ಲಿ ಆಗ್ನೇಯ ಅವರು ವಿದ್ಯಾಭ್ಯಾಸ ಮುಂದುವರಿಸಲಿದ್ದಾರೆ. ಅವರನ್ನು ಎಕ್ಸೆಲ್ ಕಾಲೇಜಿನ ಆಡಳಿತ ಮಂಡಳಿ ಅಧ್ಯಕ್ಷ ಸುಮಂತ್ ಕುಮಾರ್ ಜೈನ್ , ಪ್ರಾಂಶುಪಾಲರು, ಪ್ರಾಧ್ಯಾಪಕ ವೃಂದ ಅಭಿನಂದಿಸಿದ್ದಾರೆ.

LEAVE A REPLY

Please enter your comment!
Please enter your name here