Site icon Suddi Belthangady

ಡಾ|| ಡಿ ವೀರೇಂದ್ರ ಹೆಗ್ಗಡೆಯವರನ್ನು ಭೇಟಿ ನೀಡಿ ಆಶೀರ್ವಾದ ಪಡೆದುಕೊಂಡ ದೇಶಯಾತ್ರೆ ಕೈಗೊಂಡ ಯುವಕರ ತಂಡ

ಬೆಳ್ತಂಗಡಿ :  75ನೇ ಸ್ವಾತಂತ್ರ್ಯ ಅಮೃತ ಮಹೋತ್ಸವದ ದಿನದಂದು ಅರ್ಥಪೂರ್ಣ ದೇಶಯಾತ್ರೆ ಕೈಗೊಂಡ ಯುವಕರ ತಂಡ ಧರ್ಮಸ್ಥಳ ಕ್ಕೆ ಭೇಟಿ ನೀಡಿ ಡಾ|| ಡಿ ವಿರೇಂದ್ರ ಹೆಗ್ಗಡೆ ಯವರ ಆಶೀರ್ವಾದ ಪಡೆದುಕೊಂಡರು.

999 ರಲ್ಲಿ ಕಾರ್ಗಿಲ್ ಯುದ್ಧದಲ್ಲಿ ಹುತಾತ್ಮರಾದ 2002 ರಲ್ಲಿ ನಿರ್ಮಾಣಗೊಂಡಿರುವ ದೇಶದ ಮೊದಲ ಕಾರ್ಗಿಲ್ ಸ್ಮಾರಕವು ಧಾರವಾಡದ ಜಿಲ್ಲಾಧಿಕಾರಿ ಕಛೇರಿ ಆವರಣದಲ್ಲಿದೆ. ದೇಶದ ವೀರ ಸೈನಿಕರ ತ್ಯಾಗ ಮತ್ತು ದೇಶಪ್ರೇಮದ ಪ್ರತೀಕವಾಗಿರುವ ಈ ಸ್ಮಾರಕದ ಬಗ್ಗೆ ಧಾರವಾಡದ ಹಾಗೂ ನಾಡಿನ ಬಹಳಷ್ಟು ಜನರಿಗೆ ತಿಳಿದಿಲ್ಲ. ದೇಶದ ತ್ಯಾಗದ ಪ್ರತೀಕವಾಗಿರುವ ಈ ಸ್ಮಾರಕವನ್ನು ರಾಷ್ಟ್ರೀಯ ಸ್ಮಾರಕವನ್ನಾಗಿ ಪರಿಗಣಿಸಿ, ಇದರ ಅಭಿವೃದ್ಧಿಯಾಗಬೇಕು ಎನ್ನುವ ಉದ್ದೇಶದಿಂದ ಕ್ರಿಯಾಶೀಲ ಯುವಕರಾದ ಡಾ. ವಿಜೇತ್ ಕುಮಾರ್ ಹೊಸಮಠ ಹಾಗೂ ಕೊಪ್ಪಳ ಜಿಲ್ಲೆ ಗಂಗಾವತಿಯ ಎಸ್ ಕುಮಾರ್ ದೇಶದ ಉದ್ದಗಲಕ್ಕೂ ಹಿಮಾಲಯನ್ನು ಬೈಕ್ ನಲ್ಲಿ ಸುಮಾರು 13,000 .ಕಿಮೀಗಳನ್ನು ಸಂಚರಿಸಿ ಹಾಗೂ 20 ರಾಜ್ಯ ಗಳನ್ನು ಸುತ್ತಿ ದೇಶ ಪ್ರೇಮ ಮೆರೆದು ನಿನ್ನೆ ಪರಮ ಪೂಜ್ಯ ಡಾ ಡಿ ವೀರೇಂದ್ರ ಹೆಗ್ಗಡೆ ಯವರನ್ನು ಭೇಟಿ ಮಾಡಿ ಆಶೀರ್ವಾದ ಪಡೆದರು.

Exit mobile version