Site icon Suddi Belthangady

ಪದ್ಮುಂಜ ಸಹಕಾರಿ ಸಂಘದ ಮಹಾಸಭೆ, 286ಕೋಟಿ ವ್ಯವಹಾರ 1ಕೋಟಿಲಾಭ


ಕಣಿಯೂರು: ಪದ್ಮುಂಜ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಮಹಾಸಭೆಯು.ಸೆ.16 ರಂದು ಪದ್ಮುಂಜ ಸಹಕಾರಿ ಸಂಘದ ವಠಾರದಲ್ಲಿ ಜರಗಿತು.

ಅಧ್ಯಕ್ಷತೆಯನ್ನು ಪದ್ಮುಂಜ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ರಕ್ಷಿತ್ ಪಣೆಕ್ಕಾರ ವಹಿಸಿದ್ದರು. ಈ ಸಾಲಿನ ವಾರ್ಷಿಕ ವ್ಯವಹಾರ ರೂ.286ಕೋಟಿನಡೆದಿದ್ದು ರೂ.1ಕೋಟಿ ಲಾಭ ಗಳಿಸಿದೆ. ಸದಸ್ಯರಿಗೆ ಶೇಕಡ .11ಡಿವಿಡೆಂಡ್ ಘೋಷಿಸಿದರು.ಗೋದಾಮು ಕಟ್ಟಡ ಮತ್ತು ಸಭಾಭವನ ಶ್ರೀಘವಾಗಿ ಉದ್ಘಾಟನೆ ಗೊಳ್ಳಲಿದೆ.ಬಂದಾರುನಲ್ಲಿ ಗೋದಾಮು ನಿರ್ಮಾಣದಲ್ಲಿ ಹಂತದಲ್ಲಿದೆ.ಮೊಗ್ರುನಲ್ಲಿ ಹೊಸ ಶಾಖೆಯಾಗಲಿದೆ ಎಂದರು.

ಸಾಧಕ ವಿದ್ಯಾರ್ಥಿಗಳಿಗೆ  ಸನ್ಮಾನ: 

ಕಾರ್ಯಕ್ರಮದಲ್ಲಿ  ಹರ್ಷ, ಕೃತಿಕಾ, ರಂಜಿತ್,  ರಶ್ಮಿತಾ ,ಚಿನ್ಮಯ, ಪ್ರೀತಿಕಾ, ಯಶಸ್ವಿ,  ಧನುಶ್ 8ಮಂದಿ ವಿದ್ಯಾರ್ಥಿಗಳಿಗೆ ಸನ್ಮಾನ ಹಾಗೂ
ಬಂದಾರು ಅತ್ಯುತ್ತಮ ಮಹಿಳಾ ಸಹಕಾರಿ ಸಂಘದ ಅಧ್ಯಕ್ಷೆ ಮಮತಾ , ಕಾರ್ಯದರ್ಶಿ ಭವ್ಯ ,5ಮಂದಿ ಬಡಕುಟುಂಬಕ್ಕೆ ತಲಾ ರೂ.5000 ರಂತೆ ಆರ್ಥಿಕ ಸಹಾಯ, 47 ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ತಲಾ ರೂ.2000ರಂತೆ ವಿದ್ಯಾನಿಧಿ, 4 ಮಂದಿ ರೈತರಿಗೆ ಪ್ರಕೃತಿ ವಿಕೋಪ ಸಹಾಯಧನ ನೀಡಲಾಯಿತು.

ವಾರ್ಷಿಕ ವರದಿಯನ್ನು ಮುಖ್ಯ ಕಾರ್ಯನಿರ್ವಣಾಧಿಕಾರಿ ರಘುಪತಿ.ಕೆ ವಾಚಿಸಿದರು. ಸಂಘದ ಉಪಾಧ್ಯಕ್ಷ ಅಶೋಕ್,  ನಿರ್ದೇಶಕರಾದ ರಾಜೀವ ರೈ, ಉದಯ ಭಟ್,  ಉದಯ ಬಿ.ಕೆ.  ರಾಮಣ್ಣ ಮಡಿವಾಳ,  ಪಿಜಿನಾ, ಶೀಲಾವತಿ, ವಿನಯಶ್ರೀ, ದಿನೇಶ್ ನಾಯ್ಕ,  ಕೇಶವ, ಡಿಸಿಸಿ ಬ್ಯಾಂಕಿನ ಪ್ರತಿನಿಧಿ ಸಂದೇಶ್ ಉಪಸ್ಥಿತರಿದ್ದರು.

ನಿರ್ದೇಶಕ ನಾರಾಯಣ ಗೌಡ ವಂದಿಸಿದರು.

Exit mobile version