Site icon Suddi Belthangady

ದೇಶಭಕ್ತಿ ಗೀತೆ ಗಾಯನ ಸ್ಪರ್ಧೆ ಹಾಗೂ ಗೊ.ರು. ಚನ್ನಬಸಪ್ಪ ರೇಂಜರ್ಸ್ ಜನಪದ ಗೀತ ಗಾಯನ

ನಡ: ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್, ಕರ್ನಾಟಕ, ದ. ಕ. ಜಿಲ್ಲಾಮಟ್ಟದ ಬುಲ್ ಬುಲ್, ಗೈಡ್ಸ್ ದೇಶಭಕ್ತಿ ಗೀತೆ ಗಾಯನ ಸ್ಪರ್ಧೆ ಹಾಗೂ ಗೊ.ರು. ಚನ್ನಬಸಪ್ಪ ರೇಂಜರ್ಸ್ ಜನಪದ ಗೀತ ಗಾಯನ ಸ್ಪರ್ಧೆಯು ಸೆ.13 ರಂದು ಮಂಗಳೂರಿನಲ್ಲಿ ನಡೆಯಿತು.

ಜಿಲ್ಲಾ ಮಟ್ಟದ ರೇಂಜರ್ ವಿಭಾಗದ ಜನಪದ ಗೀತೆ ಸ್ಪರ್ಧೆಯಲ್ಲಿ ಸರಕಾರಿ ಪದವಿ ಪೂರ್ವ ಕಾಲೇಜು ನಡ ಇಲ್ಲಿನ ರೇಂಜರ್ ವಿದ್ಯಾರ್ಥಿನಿ ಕುಮಾರಿ ಸವಿತಾ ಇವರು ದ್ವಿತೀಯ ಸ್ಥಾನ ವನ್ನು ಪಡೆದು ಸಂಸ್ಥೆಗೆ ಕೀರ್ತಿ ತಂದಿರುತ್ತಾಳೆ. ರೇಂಜರ್ ಲೀಡರ್  ವಸಂತಿ ಪಿ. ಹಾಗೂ ಕನ್ನಡ ಉಪನ್ಯಾಸಕಿ  ಲಿಲ್ಲಿ ಮೇಡಂ ಮಾರ್ಗದರ್ಶನ ನೀಡಿದರು.

Exit mobile version