Site icon Suddi Belthangady

ಗುರುವಾಯನಕೆರೆ ಧರಾಶಾಹಿಯಾದ ಗೋಡೆ: ತಾತ್ಕಾಲಿಕ ವ್ಯವಸ್ಥೆ ಮಾಡಿಕೊಟ್ಟ ಸ್ವಯಂಸೇವಕರು


ಶೌರ್ಯ ವಿಪತ್ತು ನಿರ್ವಹಣಾ ಘಟಕ ಅಳದಂಗಡಿ ವಲಯ ಸೇವಾ ಸಂಖ್ಯೆ 2 ಸಪ್ಟಂಬರ್ 13 ಇತ್ತೀಚೆಗೆ ಸುರಿದ ಅಕಾಲಿಕ ಮಳೆಯ ಪರಿಣಾಮ ಇಂದು ಬೆಳಿಗ್ಗೆ ಕರಂಬಾರು ಎರ್ಮಾತೋಡಿ ನಿವಾಸಿ  ಬಾಬು ಆಚಾರ್ಯ ಎಂಬವರ ದನದ ಕೊಟ್ಟಿಗೆಯ ಗೋಡೆಯು ಧರಶಾಹಿಯಾಗಿತ್ತು. ಕರ್ತವ್ಯದಲ್ಲಿದ್ದ ಸ್ಥಳೀಯ ಸೇವಾ ಪ್ರತಿನಿಧಿ  ಮಮತಾ ರವರ ಗಮನಕ್ಕೆ ಈ ವಿಷಯ ತಿಳಿದು ಕೂಡಲೇ ಘಟಕ ಸಂಯೋಜಕ ಹಾಗೂ ಘಟಕ ಪ್ರತಿನಿಧಿಯವರಿಗೆ ಈ ವಿಷಯವನ್ನು ತಿಳಿಸಲಾಯಿತು.

ವಾರದ ಮಧ್ಯ ದಿನವಾದ ಕಾರಣ ವಿಷಯವನ್ನು ಯೋಜನಾಧಿಕಾರಿ  ಯಶವಂತ್ ರವರ ಗಮನಕ್ಕೆ ತಂದು ಸಂಭಾವ್ಯ ಸ್ವಯಂಸೇವಕರು ಒಟ್ಟಾಗಿ ಬಾಬುರವರ ಮನೆಗೆ ತೆರಳಿ ವಸ್ತುಸ್ಥಿತಿಯನ್ನು ಗಮನಿಸಿದ್ದು ಕೊಟ್ಟಿಗೆ ಚಾವಣಿ ಯಾವುದೇ ಸಮಯದಲ್ಲಾದರೂ ಮುರಿದುಬಿಡುವ ಸ್ಥಿತಿಯಲ್ಲಿ ಇರುವುದರಿಂದ ಛಾವಣಿ ಬೀಳದಂತೆ ತಾತ್ಕಾಲಿಕವಾಗಿ ಮರದ ಕಂಬಗಳನ್ನು ಆಧಾರವಾಗಿ ಕೊಡಲಾಯಿತು.

ಮನೆಯ ಇನ್ನೊಂದು ಭಾಗದಲ್ಲಿ ತಗಡಿನ ಸೀಟುಗಳನ್ನು ಹೊದಿಸಿ ದನಗಳ ವಾಸಕ್ಕಾಗಿ ವ್ಯವಸ್ಥೆ ಕಲ್ಪಿಸಲಾಗಿದ್ದು,  ಮೇಲ್ಚಾವಣಿಗೆ ಅಗತ್ಯವಿದ್ದ ಸೀಟುಗಳನ್ನು ಸ್ಥಳೀಯ ನಿವಾಸಿ  ಜಯರಾಮ ಸಪಲ್ಯ ಶ್ರೀಗಂಧ ಇವರು ಉಚಿತವಾಗಿ ನೀಡಿ ಮಾನವೀಯತೆ ಮೆರೆದಿರುತ್ತಾರೆ.

ಸೇವಾ ಕಾರ್ಯದಲ್ಲಿ ಸ್ವಯಂಸೇವಕರಾದ ರಾಜೇಶ್ ಕುದುರು ರವಿಚಂದ್ರ ಶಿರ್ಲಾಲ್ ಯಶೋಧರ ಸುವರ್ಣ ಹಾಗೂ ಶ್ರೀಕಾಂತ ರವರು ತಮ್ಮನ್ನು ತೊಡಗಿಸಿಕೊಂಡಿರುತ್ತಾರೆ.  ಕರಮ್ಬಾರು ಬಿ ಒಕ್ಕೂಟದ ಅಧ್ಯಕ್ಷ ಸುರೇಶ್ ರವರು ಹಾಗೂ ಸೇವಾ ಪ್ರತಿನಿಧಿ  ಮಮತಾರವರು ಪ್ರಾರಂಭದಿಂದ ಕೊನೆಯವರೆಗೂ ಸ್ವಯಂ ಸೇವಕರಿಗೆ ಸಹಕಾರ ನೀಡಿದರು.

ಕೊಟ್ಟಿಗೆಯ ಗೋಡೆಯ ಹೊರಭಾಗಕ್ಕೆ  ಹಾನಿಯಾಗಿದ್ದು,  ಯಾವುದೇ ಅನಾಹುತ ಸಂಭವಿಸಲಿಲ್ಲ. ಪರೋಕ್ಷವಾಗಿ ಗೋಮಾತೆಯ ಸೇವೆ ಮಾಡಿದ ಧನ್ಯತಾ ಭಾವದಿಂದ ಸ್ವಯಂಸೇವಕರು ಮನೆಗೆ ಮರಳಿದರು.

Exit mobile version