Site icon Suddi Belthangady

ಗೇರುಕಟ್ಟೆ: ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆ

ಗೇರುಕಟ್ಟೆ :ಇಲ್ಲಿಯ ಮನ್ ಶರ್ ಶಿಕ್ಷಣ ಸಂಸ್ಥೆಯಲ್ಲಿ ಸೆ.13 ರಂದು ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ ಮತ್ತು ಕ್ಷೇತ್ರ ಸಂಪನ್ಮೂಲ ಕೇಂದ್ರ ಬೆಳ್ತಂಗಡಿ ಹಾಗೂ ಮನ್ ಶರ್ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ವತಿಯಿಂದ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆ- 2022 ನಡೆಯಿತು.


ಕಾರ್ಯಕ್ರಮದ ಉದ್ಘಾಟನೆಯನ್ನು ಕಳಿಯ ಗ್ರಾಮ ಪಂಚಾಯತ್ ನ ಅಧ್ಯಕ್ಷೆ ಸುಭಾಷಿಣಿ ಜನಾರ್ಧನ ಗೌಡ ಕೆ ನೆರವೇರಿಸಿದರು.

ಮನ್ ಶರ್ ಪ್ಯಾರಾ ಮೆಡಿಕಲ್ ಕಾಲೇಜಿನ ಪ್ರಾಂಶುಪಾಲ ಹೈದರ್ ಮರ್ದಾಳ ಅಧ್ಯಕ್ಷತೆ ವಹಿಸಿದ್ದರು.

ಮುಖ್ಯ ಅತಿಥಿಗಳಾಗಿ ಕ್ಷೇತ್ರ ಸಂಪನ್ಮೂಲ ಕೇಂದ್ರದ ಸಮನ್ವಯಾಧಿಕಾರಿ ಶಂಭುಶಂಕರ್, ಗ್ರಾಮ ಪಂಚಾಯತ್ ಸದಸ್ಯರಾದ ಕೆ.ಎಮ್ಅ, ಬ್ದುಲ್ ಕರೀಮ್, ಪ್ರತಿಭಾ ಕಾರಂಜಿ ಸ್ಪರ್ಧೆಯ ನೋಡಲ್ ಅಧಿಕಾರಿ ಚೇತನಾಕ್ಷಿ, ಶಿಕ್ಷಣ ಸಂಯೋಜಕ ಸಿದ್ದಲಿಂಗಯ್ಯ,ಮನ್ ಶರ್ ಸಂಸ್ಥೆಯ ಉಪಾದ್ಯಕ್ಷ ಅಹಮ್ಮದ್ ಎ.ಕೆ., ಪುಂಜಾಲಕಟ್ಟೆ ಪ್ರೌಢಶಾಲಾ ಅಧ್ಯಾಪಕ ದರಣೇಂದ್ರ ಜೈನ್ ಉಪಸ್ಥಿತರಿದ್ದರು.

ಮನ್ ಶರ್ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಬಲ್ಕೀಸ್ ಸಾದಿಕ್ ಸ್ವಾಗತಿಸಿ, ರಶೀದ್ ಕುಪ್ಪೆಟ್ಟಿ ದನ್ಯವಾದವಿತ್ತರು.ಮನ್ ಶರ್ ಆಂಗ್ಲ ಮಾದ್ಯಮ ಶಾಲೆಯ ಮುಖ್ಯೋಪಾದ್ಯಾಯಿನಿ  ಉಷಾ ಕಾರ್ಯಕ್ರಮ ನಿರೂಪಿಸಿದರು. ಸುಮಾರು 35 ಶಾಲೆಗಳಿಂದ ಶಿಕ್ಷಕರು ಮತ್ತು 600 ಕ್ಕೂ ಹೆಚ್ಚು ವಿದ್ಯಾರ್ಥಿಗಳು ವಿವಿಧ ಸರ್ಧೆಗಳಲ್ಲಿ ಭಾಗವಹಿಸಿದ್ದರು.


ಮನ್ ಶರ್ ಪ್ಯಾರಾಮೆಡಿಕಲ್ ವಿದ್ಯಾರ್ಥಿಗಳಿಂದ ಉಚಿತ ಆರೋಗ್ಯ ಶಿಬಿರ ಮತ್ತು ವಿಜ್ಞಾನ ಸಂಗ್ರಹಾಲಯದ ದೇಹದ ಪ್ರಾಕ್ಟಿಕಲ್ ಆಗಿ ವಿವಿದ ಅಂಗಗಳನ್ನು ಸಾರ್ವಜನಿಕ ಪ್ರದರ್ಶನಕಿಟ್ಟಿದ್ದರು. ಮನ್ ಶರ್ ನ ಎಲ್ಲಾ ಅಧ್ಯಾಪಕರು ಮತ್ತು ಪ್ಯಾರಾ ಮೆಡಿಕಲ್ ನ ವಿದ್ಯಾರ್ಥಿಗಳು ಸಹಕರಿಸಿದರು.

Exit mobile version