Site icon Suddi Belthangady

ಬಡಗಕಾರಂದೂರು: ಭತ್ತದ ಅಧಿಕ ಬೆಳವಣಿಗೆ ಹಾಗೂ ಅಧಿಕ ಇಳುವರಿಗಾಗಿ ಮೆಗ್ನೀಶಿಯಂ ಸಲ್ಫೇಟ್ ನ ಪ್ರಭಾವದ ಕುರಿತು ರೈತರಿಗೆ ತರಬೇತಿ ಕಾರ್ಯಕ್ರಮ

ಬಡಗಕಾರಂದೂರು: ಭಾ ಕೃ ಅ ಪ ಕೃಷಿ ವಿಜ್ಞಾನ ಕೇಂದ್ರ ಮಂಗಳೂರು ವತಿಯಿಂದ ಬೆಳ್ತಂಗಡಿ ತಾಲೂಕಿನ ಬಡಗಕಾರಂದೂರು ಗ್ರಾಮದಲ್ಲಿ ಕರಾವಳಿ ಪ್ರದೇಶದ ಭತ್ತದ ಬೆಳವಣಿಗೆ ಹಾಗೂ ಇಳುವರಿಯ ಮೇಲೆ ಮೆಗ್ನೀಷಿಯಂ ಸಲ್ಫೇಟ್ ನ ಪ್ರಭಾವದ ಕುರಿತು ರೈತರಿಗೆ ತರಬೇತಿ ಕಾರ್ಯಕ್ರಮವನ್ನು ಆಯೋಜಿಸಲಾಯಿತು .

ಈ ಕಾರ್ಯಕ್ರಮದಲ್ಲಿ ಕೇಂದ್ರದ ಮಣ್ಣು ವಿಜ್ಞಾನಿ ಡಾಕ್ಟರ್ ಮಲ್ಲಿಕಾರ್ಜುನ ಮಾತನಾಡಿ ಬಿಜೋಪಚಾರ ಜೈವಿಕ ಗೊಬ್ಬರಗಳ ಬಳಕೆ, ಸಸಿ ಮಡಿ ತಯಾರಿಕೆ, ಪೋಷಕಾಂಶಗಳ ಬಳಕೆ ಹುಳಿಮಣ್ಣಿಗೆ ಕೃಷಿ ಸುಣ್ಣದ ಬಳಕೆ ಭತ್ತದ ಗೆದ್ದೆಗಳಲ್ಲಿ ಕಳೆನಾಶಕದ ಬಳಕೆ ಹಾಗೂ ಮೆಗ್ನೀಷಿಯಂ ಸಲ್ಫೇಟ್ ನ ಬಳಕೆಯಿಂದ ಭತ್ತದ ಬೆಳೆಗೆ ಆಗುವ ಪ್ರಯೋಜನಗಳ ಕುರಿತು ರೈತರಿಗೆ ಮಾಹಿತಿ ನೀಡಿ ಈ ತಂತ್ರಜ್ಞಾನದ ಪರಿಶೀಲನೆಗಾಗಿ ಆಯ್ದ ಐದು ಜನ ರೈತರಿಗೆ ಗದ್ದೆಗಳಲ್ಲಿ ಕ್ಷೇತ್ರ ಪ್ರಯೋಗಗಳನ್ನು ಕೈಗೊಳ್ಳಲು ರಸಗೊಬ್ಬರದ ಪರಿಕರಗಳನ್ನು ಒದಗಿಸಲಾಯಿತು.

ನಂತರ ಮಾತನಾಡಿದ ಡಾಕ್ಟರ್ ಶಿವಕುಮಾರ್  ಹೈನುಗಾರಿಕೆಯಲ್ಲಿ ಖಣಿಜ ಮಿಶ್ರಣಗಳ ಬಳಕೆ ಶುದ್ಧ ಹಾಲಿನ ಉತ್ಪಾದನೆ, ಪಶುಗಳಲ್ಲಿನ ಗರ್ಭಧಾರಣೆ ಸಮಸ್ಯೆಗಳ ನಿರ್ವಹಣೆ ಕುರಿತು ಮಾಹಿತಿ ನೀಡಿದರು .ಬಳಿಕ ರೈತ ಮತ್ತು ರೈತ ಮಹಿಳೆಯರ ಪ್ರಶ್ನೆಗಳಿಗೆ ಸೂಕ್ತ ಸಲಹೆಗಳನ್ನು ನೀಡಿ ರೈತರ ಭತ್ತದ ಗದ್ದೆಗಳಿಗೆ ಭೇಟಿ ನೀಡಿ ಸಮಗ್ರ ಪೋಷಕಾಂಶಗಳ ನಿರ್ವಹಣೆ ಕೈಗೊಳ್ಳಲು ಸೂಚಿಸಲಾಯಿತು.

Exit mobile version