Site icon Suddi Belthangady

ಹತ್ಯಡ್ಕ ಪ್ರಾ.ಕೃ.ಪ.ಸ.ಸಂಘ ಅರಸಿನಮಕ್ಕಿ ಇದರ 2021-22ನೇ ಸಾಲಿನ ವಾರ್ಷಿಕ ಮಹಾಸಭೆ

ಅರಸಿನಮಕ್ಕಿ: ಹತ್ಯಡ್ಕ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಅರಸಿನಮಕ್ಕಿ ಇದರ 2021-22ನೇ ಸಾಲಿನ ವಾರ್ಷಿಕ ಮಹಾಸಭೆಯು ಸೆ.11ರಂದು ಶ್ರೀ ಗೋಪಾಲಕೃಷ್ಣ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ ಅರಸಿನಮಕ್ಕಿಯಲ್ಲಿ ಜರುಗಿತು.

ಸಭೆಯ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷರಾದ ರಾಘವೇಂದ್ರ ನಾಯಕ್ ವಹಿಸಿದ್ದರು.  ಮುಖ್ಯಕಾರ್ಯನಿರ್ವಹಣಾಧಿಕಾರಿ ಪಿ.ತ್ಯಾಂಪಣ್ಣ ಶೆಟ್ಟಿಗಾರ್ ವಾರ್ಷಿಕ ವರದಿ ಮಂಡಿಸಿದರು. ವೇದಿಕೆಯಲ್ಲಿ ಸಂಘದ ಉಪಾಧ್ಯಕ್ಷ ರಾಜು ಕೆ ಸಾಲ್ಯಾನ್ , ಆಡಳಿತ ಮಂಡಳಿ ಸದಸ್ಯರು ಉಪಸ್ಥಿತರಿದ್ದರು. ಸದಸ್ಯರಿಗೆ 10% ಡಿವಿಡೆಂಟ್ ಘೋಷಿಸಲಾಯಿತು.

2021-22ನೇ ಸಾಲಿನಲ್ಲಿ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಅರಸಿನಮಕ್ಕಿ ಪ್ರೌಢಶಾಲೆ ಮತ್ತು ನೇಲ್ಯಡ್ಕ ಪ್ರೌಢಶಾಲೆಯಲ್ಲಿ ಅತೀ ಹೆಚ್ಚು ಅಂಕಗಳಿಸಿದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಮತ್ತು ಸಂಘದ ಸದಸ್ಯರ ಮಕ್ಕಳ ಪೈಜಿ ಹೊರಗಿನ ಶಾಲೆಗಳಲ್ಲಿ ಕಲಿತು ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಅತೀ ಹೆಚ್ಚು ಅಂಕ ಗಳಿಸಿದ ಪ್ರತಿಭಾವಂತ ವಿದ್ಯಾರ್ಥಿಗೆ ಗೌರವಧನವನ್ನಿತ್ತು ಪುರಸ್ಕರಿಸಲಾಯಿತು.

2021-22ನೇ ಸಾಲಿನಲ್ಲಿ ಸರಕಾರಿ ಪದವಿಪೂರ್ವ ಕಾಲೇಜು ಅರಸಿನಮಕ್ಕಿ ಇಲ್ಲಿ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಅತೀ ಹೆಚ್ಚು ಅಂಕ ಗಳಿಸಿದ ಪ್ರತಿಭಾವಂತ ವಿದ್ಯಾರ್ಥಿಗೆ ಗೌರವಧನವನ್ನಿತ್ತು ಪುರಸ್ಕಾರ ಮಾಡಲಾಯಿತು. ಹಾಗೂ ಅರಸಿನಮಕ್ಕಿ ಗ್ರಾ.ಪಂ ನಲ್ಲಿ ಕಾರ್ಯದರ್ಶಿಯಾಗಿ ನಿವೃತ್ತರಾದ ಕೆ ವೆಂಕಪ್ಪ ಗೌಡರವರನ್ನು ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ನಿರ್ದೇಶಕ ರತೀಶ್ ಗೌಡ ಸ್ವಾಗತಿಸಿ, ಸಿಬ್ಬಂದಿ ಹರಿಣಾಕ್ಷಿ ನಿರೂಪಿಸಿದರು. ನಿರ್ದೇಶಕ ಮುರಳೀಧರ ಶೆಟ್ಟಿಗಾರ್ ಧನ್ಯವಾದಗೈದರು. ಕಾರ್ಯಕ್ರಮದ ಯಶಸ್ವಿಗೆ ಸಿಬ್ಬಂದಿ ವರ್ಗದವರು ಸಹಕರಿಸಿದರು. ಸದಸ್ಯರು ಅತೀ ಹೆಚ್ಚಿನ ಸಂಖ್ಯೆಯಲ್ಲಿ ಭಾಗಿಯಾಗಿದ್ದರು.

 

Exit mobile version