Site icon Suddi Belthangady

ನಾರಾವಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ವಾರ್ಷಿಕ ಮಹಾಸಭೆ

ನಾರಾವಿ: ನಾರಾವಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಮಹಾಸಭೆಯು ಸೆ.11ರಂದು ಸಂಘದ ಅಧ್ಯಕ್ಷ ಸುಧಾಕರ ಭಂಡಾರಿ ಇವರ ಅಧ್ಯಕ್ಷತೆಯಲ್ಲಿ ಧರ್ಮಶ್ರೀ ಸಭಾಭವನ ದಲ್ಲಿ ಜರಗಿತು.

2021-22 ಸಾಲಿನಲ್ಲಿ ರೂ.2,17,34, 050ಕೋಟಿ ಪಾಲುಬಂಡವಾಳ ದೊಂದಿಗೆ , ಸಂಘವು 62,27, 911ಕೋಟಿ ಕ್ಷೇಮಾನಿಧಿ ಹೊಂದಿರುತ್ತದೆ. ಒಟ್ಟು ರೂ.19,96,38, 344ಕೋಟಿ ಠೇವಣಿ ಸಂಗ್ರಹಿಸಿ ರೂ.174ಕೋಟಿ ವ್ಯವಹಾರ ನಡೆಸಿ ರೂ.36,46,00,055 ಕೋಟಿ ದುಡಿಯುವ ಬಂಡವಾಳ ಹೊಂದಿದೆ ಎಂದರು, ಸಂಘದ ಅಧ್ಯಕ್ಷ ಸುಧಾಕರ ಭಂಡಾರಿ ಯವರು ಸದಸ್ಯರಿಗೆ ಶೇ 11% ಡಿವಿಡೆಂಡ್ ಘೋಶಿಸಿದರು. ಮುಖ್ಯಕಾರ್ಯನಿರ್ವಹಣಾಧಿಕಾರಿ ಎನ್. ಶಶಿಕಾಂತ್ ಜೈನ್ ಎ. ವರದಿ ಹಾಗೂ ಲೆಕ್ಕ ಪತ್ರ ಮಂಡಿಸಿ, ಕಾರ್ಯಕ್ರಮ ನಿರೂಪಿಸಿದರು. ಉಪಾಧ್ಯಕ್ಷ ಸದಾನಂದ ಗೌಡ, ನಿರ್ದೇಶಕರಾದ ಜೀವಂದರ್ ಕುಮಾರ್ , ವಿಠಲ ಪೂಜಾರಿ,, ರಾಜೇಂದ್ರ ಕುಮಾರ್, ಜಗದೀಶ್ ಹೆಗ್ಡೆ, ಲಕ್ಷ್ಮಣ ಪೂಜಾರಿ, ಲಿಂಗಪ್ಪ ಮಲೆಕುಡಿಯ, ಹರೀಶ್ ಹೆಗ್ಡೆ, ಪೆರ್ನ, ಶ್ರಿಮತಿ ಯಶೋಧ, ಶ್ರಿಮತಿ ಸುಜಲತಾ, ವಲಯ ಮೇಲ್ವಿಚಾರಕ ಸಿರಾಜುದ್ದೀನ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ನಾರಾವಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಆಶಾಲತಾ ಉಪಾಧ್ಯಕ್ಷ ಉದಯ್ ಹೆಗ್ಡೆ, ಅಂಡಿಂಜೆ ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಜಯಂತಿ, ನಾರಾವಿ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಶೇಕರ್ ಹೆಗ್ಡೆ, ಗ್ರಾಮ ಪಂಚಾಯತ್ ಸದಸ್ಯರು, ಹಾಲು ಉತ್ಪಾದಕ ಸಹಕಾರಿ ಸಂಘ ದ ಸದಸ್ಯರು,ಗ್ರಾಮಸ್ಥರು ಊರ ಗಣ್ಯರು ಉಪಸ್ಥಿತರಿದ್ದರು. ಉಪಾಧ್ಯಕ್ಷ ಸದಾನಂದ ಗೌಡರವರು ಸ್ವಾಗತಿಸಿದರು. ನಿರ್ದೇಶಕರಾದ ವಿಠಲ ಪೂಜಾರಿ ವಂದಿಸಿದರು. ಕಾರ್ಯಕ್ರಮದಲ್ಲಿ ನಾರಾವಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ವ್ಯಾಪ್ತಿಗೆ ಬರುವ 5ಗ್ರಾಮಗಳ ಆಯ್ದ ಉತ್ತಮ 10ಜನ ಕೃಷಿಕರಿಗೆ, 5ಗ್ರಾಮದ 5 ಜನ ಹೈನುಗಾರಿಕೆ ಮಾಡಿದ ಉತ್ತಮ ಹೈನುಗಾರರನ್ನು, ಅತೀ ಹೆಚ್ಚು ವ್ಯವಹಾರ ಮಾಡಿದ ಗ್ರಾಹಕರನ್ನು ಗೌರಹಿಸಲಾಹಿತು.

Exit mobile version