ಗುರುವಾಯನಕೆರೆ : ವಿಕಾಸ ವಿವಿಧೋದ್ದೇಶ ಸಹಕಾರಿ ಸಂಘದ ವಾರ್ಷಿಕ ಮಹಾಸಭೆ:  ಸದಸ್ಯರಿಗೆ ಶೇ 14 ಡಿವಿಡೆಂಡ್ ಘೋಷಣೆ

0

ಗುರುವಾಯನಕೆರೆ :ವಿಕಾಸ ವಿವಿಧೋದ್ದೇಶ ಸಹಕಾರಿ ಸಂಘದ ಮಹಾಸಭೆಯು ಸೆ.10ರಂದು ಸಂಘದ ಅಧ್ಯಕ್ಷ ಎಲೋಶಿಯಸ್ ಡಿಸೋಜ ಇವರ ಅಧ್ಯಕ್ಷತೆಯಲ್ಲಿ ವಿಕಾಸ ಸದನ ಗುರುವಾಯನಕೆರೆ ಇಲ್ಲಿ ಜರಗಿತು.

ಸಂಘದಲ್ಲಿ 2021-22 ಸಾಲಿನಲ್ಲಿ ರೂ. 41.85ಕೋಟಿ ಠೇವಣಿ ಸಂಗ್ರಹವಿದ್ದು ಶೇ 26.7 ಪ್ರಗತಿಯಾಗಿದೆ. ಇತರ ಸಹಕಾರಿಯಲ್ಲಿ ರೂ.3.23 ಕೋಟಿ ಕಟ್ಟಡ ಮತ್ತು ನಿವೇಶನಕ್ಕೆ ವಿನಿಯೋಗಿಸಲಾಗಿದೆ. ಕಕ್ಕಿಂಜೆಯಲ್ಲಿ 700 ಚದರ ಅಡಿ ಕಟ್ಟಡ ಖರೀದಿಸಿ ನೋಂದಣಿ ಮಾಡಿ ರೂ.30.65 ಲಕ್ಷ ವ್ಯಯ ಮಾಡಲಾಗಿದ್ದು, ಒಟ್ಟು 24ಲಕ್ಷ ಲಾಭಗಳಿಸಿದೆ ಎಂದರು. ಸಂಘದ ಅಧ್ಯಕ್ಷ ಎಲೋಸಿಯಸ್ ಡಿಸೋಜ ರವರು ಸದಸ್ಯರಿಗೆ ಶೇ 14 ಡಿವಿಡೆಂಡ್ ಘೋಷಿಸಿದರು.

ಮುಖ್ಯಕಾರ್ಯನಿರ್ವಹಣಾಧಿಕಾರಿ ಶ್ರೀಮತಿ ಅನಿತಾ, ಉಪಾಧ್ಯಕ್ಷ ಯೋಗೀಶ್ ಪೈ, ನಿರ್ದೇಶಕರಾದ ಮೋಹನ್ ಹೆಗ್ಡೆ, ಗೋಪಿನಾಥ್ ನಾಯಕ್, ಅಂತೋನಿ ಪಾಯಿಸ್, ರಾಘವ ಶೆಟ್ಟಿ, ಗ್ರೆಗೋರಿ ಡಿಮೆಲ್ಲೋ, ಪ್ರವೀಣ್ ಕುಮಾರ್, ಜಗದೀಶ್, ಶೇಖರ ನಾಯ್ಕ, ಒಲ್ವಿನ್ ಮೋನಿಸ್, ದಿನೇಶ್ ನಾಯಕ್, ಪ್ರವೀಣ್ ಚಂದ್ರ ಮೆಹಂದಲೆ, ಶ್ರೀಮತಿ ಮಮತಾ ಎಂ. ಶೆಟ್ಟಿ, ಶ್ರಿಮತಿ ಪ್ರೇಮಾವತಿ ಭಟ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಪ್ರಭಾರ ಮುಖ್ಯಕಾರ್ಯನಿರ್ವಹಣಾಧಿಕಾರಿ ರೋಹಿತ್ ಕುಮಾರ್ ಕೆ.ವರದಿ ಹಾಗೂ ಲೆಕ್ಕ ಪತ್ರ ಮಂಡಿಸಿದರು. ಉಪಾಧ್ಯಕ್ಷ ಯೋಗೀಶ್ ಪೈ ಸ್ವಾಗತಿಸಿ, ಸುಕನ್ಯಾ ಕಾಮತ್ ಪ್ರಾರ್ಥನೆ ಹಾಡಿದರು.

LEAVE A REPLY

Please enter your comment!
Please enter your name here