Site icon Suddi Belthangady

ಡಿ.ಕೆ. ಆರ್.ಡಿ.ಎಸ್(ರಿ) ಬೆಳ್ತಂಗಡಿ ಪೌಷ್ಟಿಕ ಆಹಾರ ಮಾಹಿತಿ, ಪ್ರಾತ್ಯಕ್ಷಿಕೆ ಹಾಗೂ ಗುರುವಂದನಾ ಕಾರ್ಯಕ್ರಮ

ಬೆಳ್ತಂಗಡಿ: ಡಿ.ಕೆ‌.ಆರ್.ಡಿ.ಎಸ್ (ರಿ)ಬೆಳ್ತಂಗಡಿ ನೇತೃತ್ವದಲ್ಲಿ ಸೆ.9ರಂದು  ಪೌಷ್ಟಿಕ ಆಹಾರ ಮಾಹಿತಿ ಮತ್ತು ಪ್ರಾತ್ಯಕ್ಷಿಕೆ ಹಾಗೂ ಗುರುವಂದನಾ ಕಾರ್ಯಕ್ರಮವು ಬೈಂದೂರು ತಾಲೂಕಿನ ಮುಲ್ಲಿಬಾರು ಅಂಗನವಾಡಿ, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮುಲ್ಲಿಬಾರು, ತೊಂಡೆಮಕ್ಕಿ ಅಂಗನವಾಡಿ ಹಾಗೂ ರತ್ತುಬೈ ಜನತಾ ಪ್ರೌಢಶಾಲೆ ಬೈಂದೂರು ಇಲ್ಲಿ ಆಯೋಜಿಸಲಾಯಿತು.

ಈ ಕಾರ್ಯಕ್ರಮದಲ್ಲಿ ಪೌಷ್ಟಿಕ ಆಹಾರದ ಬಗ್ಗೆ ಮಾಹಿತಿ ಹಾಗೂ ಪ್ರಾತ್ಯಕ್ಷಿಕೆ ನಡೆಯಿತು. ಉತ್ತಮ ಪೌಷ್ಟಿಕ ಆಹಾರ ತಯಾರಿಸಿದವರಿಗೆ ಬಹುಮಾನ ವಿತರಿಸಲಾಯಿತು.

ಗುರುವಂದನಾ ಕಾರ್ಯಕ್ರಮದ ಅಂಗವಾಗಿ ಶಿಕ್ಷಕರನ್ನು ಸನ್ಮಾನಿಸಲಾಯಿತು.

ಶಾಲಾ ಶಿಕ್ಷಕ ವೃಂದರವರು, ಅಂಗನವಾಡಿ ಕಾರ್ಯಕರ್ತೆಯರು, ಮುಖ್ಯ ಅತಿಥಿಗಳಾಗಿ ವೇದಾವತಿ, ಬೈಂದೂರು ಸಮುದಾಯ ಆರೋಗ್ಯ ಕೇಂದ್ರದ ಅಧಿಕಾರಿ ಕುಮಾರಿ ಶ್ವೇತಾ, ಶ್ರೀನಿಧಿ ಮಹಾಸಂಘದ ಅಧ್ಯಕ್ಷೆಯಾದ  ಭಾನುಮತಿ ಬಿ.ಕೆ., ತೊಂಡೆಮಕ್ಕಿ ಶಾಲೆಯ ಮುಖ್ಯ ಗುರುಗಳಾದ  ಮಧುಸೂದನ್, ಸ್ವ ಸಹಾಯ ಸಂಘಗಳ ಮಹಿಳೆಯರು, ಬಾಲವಿಕಾಸ ಸಮಿತಿಯ ಪದಾಧಿಕಾರಿಗಳು, ಮಕ್ಕಳ ಪೋಷಕರು ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಡಿ.ಕೆ.ಆರ್. ಡಿ.ಎಸ್ ಸಂಸ್ಥೆಯ ನಿರ್ದೇಶಕರಾದ ಫಾ. ಬಿನೋಯಿ ಎ.ಜೆ. ಮುಖ್ಯ ಅತಿಥಿಯಾಗಿ ಈ ಕಾರ್ಯಕ್ರಮ ಹಮ್ಮಿಕೊಂಡ ಉದ್ದೇಶದ ಬಗ್ಗೆ ವಿವರಿಸಿದರು. ಸಂಸ್ಥೆಯ ಕಾರ್ಯಕರ್ತೆಯರಾದ  ಮುತ್ತು ಮೊಗವೀರ ಹಾಗೂ  ಸರೋಜರವರು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು.

ಡಿ.ಕೆ.ಆರ್. ಡಿ.ಎಸ್ ಸಂಸ್ಥೆಯ ಸಂಯೋಜಕರಾದ  ಸುನಿಲ್ ಗೊನ್ಸಾಲ್ವಿಸ್ ಕಾರ್ಯಕ್ರಮ ನಿರೂಪಿಸಿದರು. ಒಟ್ಟು 350 ಮಂದಿ ಉಪಸ್ಥಿತರಿದ್ದರು.

Exit mobile version