Site icon Suddi Belthangady

ಮಡಂತ್ಯಾರು: ನಿವೃತ್ತ ಲೂಸಿ ಟೀಚರ್ ನಿಧನ

ಮಡಂತ್ಯಾರು : ಮಡಂತ್ಯಾರು ಪೊಂಪೈ ಮನೆಯ ಅರ್ಥಿಲ್ ಶಾಂತಿ ಧಾಮದ ಲೂಸಿ ರೊಡ್ರಿಗಸ್ ( ಟೀಚರ್) 89 ವರ್ಷ ಸೆ.6ರಂದು ವಯೋಸಹಜವಾಗಿ ನಿಧನರಾಗಿದ್ದಾರೆ.

ಗಾರ್ಡಿಯನ್ ಏಂಜಲ್ಸ್ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮುಖ್ಯೋಪಾಧ್ಯಯರಾಗಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ್ದರು.

ಮೃತರು ಅವಿವಾಹಿತರಾಗಿದ್ದು ಮಡಂತ್ಯಾರುನಲ್ಲಿ ಲೂಸಿ ಟೀಚರ್  ಎಂದೇ  ಪ್ರಖ್ಯಾತಿ ಪಡೆದಿರುವ ಇವರು ಸೇಕ್ರೆಡ್ ಹಾರ್ಟ್ ಚರ್ಚ್ ಪಾಲನಾ ಮಂಡಳಿಯ ಸಕ್ರೀಯ ಸದಸ್ಯರಾಗಿದ್ದರು. ಮಡಂತ್ಯಾರು ಮಹಿಳಾ ಮಂಡಲದ ಅದ್ಯಕ್ಷೆಯಾಗಿ, ನೂತನ ಕಟ್ಟಡ ಕಟ್ಟುವ ಸಮಯದಲ್ಲಿ, ಉದ್ಘಾಟನಾ ಸಮಾರಂಭದಲ್ಲಿ ಬಹಳಷ್ಟು ಕೆಲಸ ಮಾಡಿ ಜನಾನುರಾಗಿಯಗಿದ್ದರು.

ಮೃತರು ನೂತನ್ ಕ್ಲಾತ್ ಸೆಂಟರ್ ಮಾಲಕ ವಲೇರಿಯನ್ ರೊಡ್ರಿಗಸ್ ಸಹೋದರ ಸೇರಿದಂತೆ ಬಂದು ವರ್ಗದವರನ್ನು ಅಗಲಿದ್ದಾರೆ.

Exit mobile version