Site icon Suddi Belthangady

ಸೈ೦ಟ್ ಥೋಮಸ್ ಪ್ರೌಢ ಶಾಲೆ ನೆರಿಯ ದಲ್ಲಿ ಶಿಕ್ಷಕ ದಿನಾಚರಣೆ ಹಾಗೂ ಸಾಧಕರಿಗೆ ಸನ್ಮಾನ

ನೆರಿಯ :  ಭಾರತದ ದ್ವಿತೀಯ ರಾಷ್ಟ್ರಪತಿ ಸರ್ವಪಲ್ಲಿ ರಾಧಾಕೃಷ್ಣನ್ ಇವರ ಹುಟ್ಟುಹಬ್ಬದ ವಿಶೇಷವಾಗಿ ಆಚರಿಸಲ್ಪಡುವ ಶಿಕ್ಷಕರ ದಿನಾಚರಣೆಯನ್ನು ನೆರಿಯ ಸಂತ ಥೋಮಸ್ ಅನುದಾನಿತ ಪ್ರೌಢ ಶಾಲೆಯಲ್ಲಿ ಸೆ.06 ರಂದು ವಿಜೃಂಭಣೆಯಿಂದ ಆಚರಿಸಲಾಯಿತು.

‘”ಬೋಧನೆ ಇದು ಒಂದು ವೃತ್ತಿಯಲ್ಲ, ಇದೊಂದು ಜೀವನ ಪದ್ಧತಿಯೆಂದು” ಶಾಲಾ ಸಂಚಾಲಕರಾದ ವಂದನಿಯ ಶಾಜಿ ಮಾತ್ಯು ಸೂಚಿಸಿದರು. ವಿದ್ಯಾರ್ಥಿಗಳಿಂದ ಎಲ್ಲಾ ಶಿಕ್ಷಕರನ್ನು ಹೂ ಗುಚ್ಚ ನೀಡಿ ಗೌರವ ತೋರಿಸಲಾಯಿತು.ವಿದ್ಯಾರ್ಥಿಗಳಿಂದ ವಿವಿಧ ಬಗೆಯ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು.

ಪ್ರಸ್ತುತ ಸಂದರ್ಭದಲ್ಲಿ ನೆರಿಯ ಗ್ರಾಮದ ಸಿಯೋನ್ ಆಶ್ರಮ ಟ್ರಸ್ಟ್ ನ ಮಾನೇಜಿಂಗ್ ಟ್ರಸ್ಟಿ ಶ್ರೀಯುತ ಯು. ಸಿ ಪೌಲೊಸ್ ಮೇರಿ ದಂಪತಿಗಳಿಗೆ ಸಮಾಜ ಸೇವೆಗೆ ಪಡೆದ ಗೌರವ  ಡಾಕ್ಡರೇಟ್ ಪ್ರಶಸ್ತಿಗೆ ಕರ್ನಾಟಕ ಕ್ಯೆಥೋಲಿಕ್ ಎಜ್ಯುಕೇಶನ್  ಚಾರಿಟೇಬಲ್ ಸೊಸೈಟಿ ಹಾಗೂ ಪ್ರೌಢ ಶಾಲಾ ವತಿಯಿಂದ ಸನ್ಮಾನ ನೀಡಲಾಯಿತು.

ಕಾರ್ಯಕ್ರಮದಲ್ಲಿ ಶಾಲಾ ಸಂಚಾಲಕರಾದ ವಂದನಿಯ ಶಾಜಿ ಮಾತ್ಯು ಯು ಸಿ ಪೌಲೋಸ್ ಶ್ರೀಮತಿ ಮೇರಿ ಪೌಲೊಸ್ ಮುಖ್ಯ ಶಿಕ್ಷಕಿ ತ್ರೆಸ್ಯ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಶಿಕ್ಷಕಿ ಅನಿತಾ ಸಾಧಕರನ್ನು ಪರಿಚಯಿಸಿದರು, ಸಹ ಶಿಕ್ಷಕ ಬೇಬಿ ಕಾರ್ಯಕ್ರಮ ನಿರೂಪಸಿದರು.

Exit mobile version