Site icon Suddi Belthangady

ಉಜಿರೆ ಹಾಲು ಉತ್ಪಾದಕರ ಸಹಕಾರ ಸಂಘದ ವಾರ್ಷಿಕ ಮಹಾಸಭೆ, ಸದಸ್ಯರಿಗೆ ಶೇ.65 ಬೋನಸ್

 

ಉಜಿರೆ :ಉಜಿರೆ ಹಾಲು ಉತ್ಪಾದಕರ ಸಹಕಾರ ಸಂಘದ 2021-22 ನೇ ಸಾಲಿನ ವಾರ್ಷಿಕ ಮಹಾಸಭೆ ಸೆ.4 ರಂದು ಉಜಿರೆ ಶ್ರೀ ಶಾರದಾ ಮಂಟಪದಲ್ಲಿ ಸಂಘದ ಅಧ್ಯಕ್ಷ ಸುರೇಶ್ ಗೌಡ ಕೂಡಿಗೆ ಇವರ ಅಧ್ಯಕ್ಷತೆಯಲ್ಲಿ ನಡೆಯಿತು. ಆರ್ಥಿಕ ವರ್ಷದಲ್ಲಿ ಸಂಘ ನಿವ್ವಳ ರೂ. 25,92,888 ಲಾಭ ಗಳಿಸಿದೆ. ಸದಸ್ಯರಿಗೆ ಶೇ.65 ಬೋನಸ್ ಘೋಷಣೆ ಮಾಡಲಾಯಿತು. ಮಹಾಸಭೆಯಲ್ಲಿ ಉತ್ತಮ ಹೈನುಗಾರ ಪ್ರಶಸ್ತಿ ಪುರಸ್ಕಾರಗೊಂಡ ಕಿಟ್ಟ ಮಾಚಾರು ಇವರನ್ನು ಹಾಗು ಅತೀ ಹೆಚ್ಚು ಹಾಲು ಹಾಕುವ ಶಶಿಕಲಾ ಇಚ್ಚಿಲ, ಸಂತೋಷ ಹೆಬ್ಬಾರ್, ಕಿಟ್ಟ ಮಾಚಾರು ಮತ್ತು ಶೈಕ್ಷಣಿಕ ಸಾಧನೆ ಗೈದ ಸದಸ್ಯರ ಮಕ್ಕಳಾದ ಆಕಾಶ್, ಕೆ. ಎಸ್. ಪೂಜಾ, ಸಂದ್ಯಾ, ಕೆ. ಎಸ್. ಹಿಮಕರ ಗೌಡ, ಅಂಕಿತಾ, ವಿಕಾಸ ಪೂಜಾರಿ, ಅಶ್ವಿನಿ, ಶ್ರೇಯ, ಮನಿಷಾ, ಚಂದ್ರಶೇಖರ ಇವರನ್ನು ಗೌರವಿಸಲಾಯಿತು.

ಸಂಘದ ಮುಖ್ಯಕಾರ್ಯನಿರ್ವಾಹಣಾಧಿಕಾರಿ ಸೌಮ್ಯಲತಾ ವರದಿ ವಾಚಿಸಿದರು. ಉಪಾಧ್ಯಕ್ಷ ವಿಜಯ ಪೂಜಾರಿ, ನಿರ್ದೇಶಕರುಗಳಾದ ಬಾಲಸುಬ್ರಹ್ಮಣ್ಯ ಭಟ್ ಜೆ., ಗೋಪಾಲಕೃಷ್ಣ ಬಿ. ಎಸ್., ನಾರಾಯಣ ಬಂಗೇರ, ಕೇಶವ ಗೌಡ, ಅನಿಲ್ ಡಿಸೋಜ, ಸಂತೋಷ ಎಂ., ಜಯಶ್ರೀ ಪ್ರಕಾಶ್, ನಾಗವೇಣಿ, ಬೇಬಿ, ವಾರಿಜ, ದ. ಕ. ಹಾಲು ಒಕ್ಕೂಟದ ಬೆಳ್ತಂಗಡಿ ವಿಸ್ತರಣಾಧಿಕಾರಿ ಆದಿತ್ಯ ಸಿ., ಪಶು ವೈದ್ಯಾಧಿಕಾರಿ ಡಾ. ಗಣಪತಿ ಬಿ. ಎಂ.,ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸಂಘದ ನಿರ್ದೇಶಕ ಗೋಪಾಲಕೃಷ್ಣ ಬಿ. ಎಸ್. ನಿರೂಪಿಸಿದರು, ನಿರ್ದೇಶಕಿ ನಾಗವೇಣಿ ಸ್ವಾಗತಿಸಿ, ಹಾಲು ಪರಿವಿಕ್ಷಕ ಅಶ್ವಥ್ ವಂದಿಸಿದರು. ಸಂಘದ ಸದಸ್ಯರು ಹಾಜರಿದ್ದು ಸಲಹೆ ಸೂಚನೆ ನೀಡಿದರು. ಸಿಬ್ಬಂದಿಗಳು ಸಹಕರಿಸಿದರು.

Exit mobile version