ಬೆಳ್ತಂಗಡಿ ಗೌಡರ ಸಂಘದಿಂದ ಪ್ರತಿಭಾ ಪುರಸ್ಕಾರ ಮತ್ತು ಸನ್ಮಾನ ಸಮಾರಂಭ

0

 

ಬೆಳ್ತಂಗಡಿ:2022ನೇ ಸಾಲಿನ ಎಸ್‌ಎಸ್‌ಎಲ್‌ಸಿ ಮತ್ತು ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ವಿಶಿಷ್ಟ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ ಹಾಗೂ ಕ್ರೀಡೆ ಮತ್ತು ಸಾಂಸ್ಕೃತಿಕ ಕ್ಷೇತ್ರದಲ್ಲಿ ಜಿಲ್ಲಾ ಮಟ್ಟಕ್ಕಿಂತ ಹೆಚ್ಚಿನ ಹಂತಗಳಲ್ಲಿ ವಿಶೇಷ ಸಾಧನೆಗೈದ ಸಮಾಜದ ವಿದ್ಯಾರ್ಥಿಗಳಿಗೆ
ಪ್ರತಿಭಾ ಪುರಸ್ಕಾರ ಮತ್ತು ಸನ್ಮಾನ ಸಮಾರಂಭವು ಸೆ.4ರಂದು
ವಾಣಿ ಶಿಕ್ಷಣ ಸಂಸ್ಥೆಗಳ ಸಭಾಭವನ, ಹಳೆಕೋಟೆ ಜರಗಿತು.


ಶ್ರೀ ನಾಗನಾಥೇಶ್ವರ ದೇವಸ್ಥಾನ ಟ್ರಸ್ಟ್ ಬೆಂಗಳೂರು ಉದ್ಯಮಿ ನಾರಾಯಣ ಬೆಗೂರು ದೀಪ ಬೆಳಗಿಸಿ ಉದ್ಘಾಟಿಸಿ ಶುಭಹಾರೈಸಿದರು.
ಅಧ್ಯಕ್ಷತೆಯನ್ನು ಗೌಡರ ಯಾನೆ ಒಕ್ಕಲಿಗರ ಸೇವಾ ಸಂಘ ಬೆಳ್ತಂಗಡಿ ಅಧ್ಯಕ್ಷ ರಾದ ಕುಶಾಲಪ್ಪ ಗೌಡ ವಹಿಸಿ ದರು


ಮುಖ್ಯ ಅತಿಥಿಗಳಾಗಿ ರಾಜ್ಯ ಒಕ್ಕಲಿಗರ ಸಂಘದ ಉಪಾಧ್ಯಕ್ಷರು ಮತ್ತು ಕಾರ್ಯದರ್ಶಿಗಳು, ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಶನ್ ಸುಳ್ಯ ಡಾ‌ ರೇಣುಕಾ ಪ್ರಸಾದ್.
ಜಿಲ್ಲಾ ಅಧ್ಯಕ್ಷರು ಒಕ್ಕಲಿಗರ ಸೇವಾ ಸಂಘದ ಲೋಕಯ್ಯ ಗೌಡ.
ಗೌಡರ ಯಾನೆ ಒಕ್ಕಲಿಗರ ಸೇವಾ ಸಂಘ ಬೆಳ್ತಂಗಡಿ ಗೌರವಾಧ್ಯಕ್ಷ ಹೆಚ್.ಪದ್ಮಗೌಡ.
, ಯುವ ಉದ್ಯಮಿಗಳು, ಗೌಡರ ಯಾನೆ ಒಕ್ಕಲಿಗರ ಸೇವಾ ಸಂಘದ ಜಿಲ್ಲಾ ಯುವ ವೇದಿಕೆ ಘಟಕದ ಪ್ರಧಾನ ಕಾರ್ಯದರ್ಶಿ ಗಣೇಶ್ ಕುಲಾಯಿ.ಸಂಘದ ಉಪಾಧ್ಯಕ್ಷ ರಾದ ನಾರಾಯಣ ಗೌಡ ದೇವಸ.ಕ್ರಷ್ಣಪ್ಪಗೌಡ ದೇವಸ್ಯ.ಯುವ ವೇದಿಕೆ ಅಧ್ಯಕ್ಷ ಯಶವಂತ್.ಮಹಿಳಾ ವೇದಿಕೆ ಅಧ್ಯಕ್ಷೆ ಸುಭಾಷಿಣಿ.ಸ್ವಂದನಾ ಸೇವಾ ಸಂಘದ ಅಧ್ಯಕ್ಷ ಸುರೇಶ್.ಬಿ. ಉಪಸ್ಥಿತಿಯಿದ್ದರು.
ಸನ್ಮಾನ: ಸಂಘದದಿಂದ ರಾಜ್ಯ ಒಕ್ಕಲಿಗರ ಸಂಘದ ಉಪಾಧ್ಯಕ್ಷ ಡಾ.ರೇಣುಕಾ ಪ್ರಸಾದ್ .ಶ್ರೀ ನಾಗನಾಥೇಶ್ವರ ದೇವಸ್ಥಾನ ಟ್ರಸ್ಟ್ ಬೆಂಗಳೂರು ಇದರ ಅಧ್ಯಕ್ಷರಾದ ನಾರಾಯಣ ಬೇಗೂರು. ಜಿಲ್ಲಾ ಸಮಗ್ರ ಕೃಷಿಕ ಪ್ರಶಸ್ತಿ ಪುರಸ್ಕೃತರಾದ ದೇವಿ ಪ್ರಸಾದ್ ಗೌಡ ಕಡಮ್ಮಾಜೆ. ತಾಲೂಕು ಮಟ್ಟದ ಕೃಷಿಕ ಪ್ರಶಸ್ತಿ ಪುರಸ್ಕೃತರಾದ ವಿಶ್ವನಾಥ ಕೆ ಗೌಡ ನಿಡ್ಲೆ. ದ್ವಿತೀಯ ಪಿಯುಸಿಯಲ್ಲಿ ವಿಜ್ಞಾನ ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದ ಕುಮಾರಿ ಶೈವಿ ಕೊಯ್ಯೂರು. ಎಸ್ .ಎಸ್ .ಎಲ್. ಸಿ. ಯಲ್ಲಿ 625 ಅಂಕ ಗಳಿಸಿದ ಕುಮಾರಿ ಮಧುಶ್ರೀ ಕೊಯ್ಯೂರು. ಕುಮಾರ ನಿರಂಜನ್. ಗೌರವ ಡಾಕ್ಟರೇಟ್ ಪದವಿ ಪುರಸ್ಕೃತ ಡಾ. ಶೌರ್ಯ ಮುಂತಾದವರಿಗೆ ಸಂಘದ ವತಿಯಿಂದ ವಿಶೇಷ ಅಭಿನಂದನೆ ಸಲ್ಲಿಸಲಾಯಿತು.


ಸ್ಪಂದನ ಸೇವಾ ಯೋಜನೆಯಿಂದ ಇಲ್ಲಿವರೆಗೆ 87 ಕುಟುಂಬಕ್ಕೆ 12. 75 ಲಕ್ಷ ನೀಡಲಾಗಿದೆ. ಇವತ್ತಿನ ಕಾರ್ಯಕ್ರಮದಲ್ಲಿ ಸೇವಾ ಯೋಜನೆಯನ್ನು 6ಬಡ ಕುಟುಂಬಗಳಿಗೆ .ರೂ.70 ಸಾವಿರ ನೀಡಲಾಯಿತು.
ಸಂಘಟನಾ ಕಾರ್ಯದರ್ಶಿ ಜಯಾನಂದ ಗೌಡ. ಸ್ವಾಗತಿಸಿ.
ಶಿಕ್ಷಕಿ ಮೀನಾಕ್ಷಿ ಎನ್.ಕಾರ್ಯಕ್ರಮ ನಿರೂಪಿಸಿ.
ಸಂಘದ ಕಾರ್ಯದರ್ಶಿ ಗಣೇಶ್ ಗೌಡ ಧನ್ಯವಾದವಿತ್ತರು.

LEAVE A REPLY

Please enter your comment!
Please enter your name here