ಪೆರಾಡಿ ಸಹಕಾರಿ ಸಂಘದ ಮಹಾಸಭೆ. ಸದಸ್ಯರಿಗೆ ಶೇ. 21 ಡಿವಿಡೆಂಡ್ ಘೋಷಣೆ

0

ಪೆರಾಡಿ : ಪೆರಾಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಮಹಾಸಭೆಯು ಸೆ.4ರಂದು ಸಂಘದ ಅಧ್ಯಕ್ಷ ಸತೀಶ್ ಕೆ. ಕಾಶಿಪಟ್ನ ರವರ ಅಧ್ಯಕ್ಷತೆ ಯಲ್ಲಿ ಸಂಘದ ವಠಾರ ದಲ್ಲಿ ಜರಗಿತು.

ಸಂಘದಲ್ಲಿ 2021-22ಸಾಲಿನಲ್ಲಿ 65,82,896ಲಕ್ಷ ಲಾಭ ಗಳಿಸಿ. ಸಂಘದ ಅಧ್ಯಕ್ಷ ಸದಸ್ಯರಿಗೆ ಶೇ 21% ಡಿವಿಡೆಂಡ್ ಘೋಷಿಸಿದರು. ಈ ಸಂದರ್ಭದಲ್ಲಿ ಸಂಘದ ಸದಸ್ಯರು ಅಭಿವೃದ್ಧಿ ಪಥ ದತ್ತ ಮುನ್ನಡೆಯಲು ಸಹಕರಿಸಿದಕ್ಕೇ ಕೃತಜ್ಞತೆ ಸಲ್ಲಿಸಿದರು. ಮುಖ್ಯಕಾರ್ಯನಿರ್ವಹಣಾದಿಕಾರಿ ಯು ಶೇಕ್ ಲತೀಫ್ ವರದಿ ಹಾಗೂ ಲೆಕ್ಕ ಪತ್ರ ಮಂಡಿಸಿದರು.

ಉಪಾಧ್ಯಕ್ಷೆ ಶ್ರೀಮತಿ ದೇವಕಿ ಡಿ.ಶೆಟ್ಟಿ ನಿರ್ದೇಶಕರಾದ ಎನ್ ಆರ್ ಸೀತಾರಾಮ ರೈ,ಪ್ರವೀಣ್ ಗಿಲ್ಬರ್ಟ್ ಪಿಂಟೊ, ಪುತ್ತು ನಾಯ್ಕ, ಜಯ ಕುಮಾರ್, ಹರಿಪ್ರಸಾದ್, ಧರ್ಮಪ್ಪ ಪೂಜಾರಿ, ಶ್ರಿಮತಿ ಸುಜಾತ, ಶ್ರೀಪತಿ ಉಪಾದ್ಯಾಯ, ರಾಜೇಶ್ ಎನ್ ಶೆಟ್ಟಿ, ಕೃಷ್ಣಪ್ಪ, ಡಿ ಸಿ ಸಿ ಬ್ಯಾಂಕ್ ಪ್ರತಿ ನಿಧಿ ಸಂದೇಶ್ ಕುಮಾರ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಮರೊಡಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಪದ್ಮ ಶ್ರೀ ಜೈನ್, ಉಪದ್ಯಕ್ಷ ಯಶೋಧರ, ಅಭಿ ವೃದ್ಧಿ ಅಧಿಕಾರಿ ವಾಸುದೇವ ನಾಯಕ್, ಕಾಶಿಪಟ್ನ ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಶಿಲ್ಪಾ, ಗ್ರಾಮ ಪಂಚಾಯತ್ ಸದಸ್ಯರು, ಹಾಲು ಉತ್ಪಾದಕರ ಸಹಕಾರ ಸಂಘದ ಸದಸ್ಯರು, ಗ್ರಾಮಸ್ಥರು ಊರ ಗಣ್ಯರು ಉಪಸ್ಥಿತರಿದ್ದರು

LEAVE A REPLY

Please enter your comment!
Please enter your name here