Site icon Suddi Belthangady

ಮೇಲಂತಬೆಟ್ಟು ಗ್ರಾಮದ ಪಡಿಬೆಟ್ಟುವಿನಲ್ಲಿ ಯಮುನಾ ಆಚಾರ್ಯ ಎಂಬ ಮಹಿಳೆ ನಾಪತ್ತೆ: ಡಿಪ್ಪಕ್ಕೆ ಹಾಲು ತೆಗೆದುಕೊಂಡು ಹೋಗುತ್ತಿದ್ದ ವೇಳೆ ಘಟನೆ

ಮೇಲಂತಬೆಟ್ಟು: ಮೇಲಂತಬೆಟ್ಟು ಗ್ರಾಮದ ಪಡಿಬೆಟ್ಟು ಎಂಬಲ್ಲಿನ ಯಮುನಾ ಆಚಾರ್ಯ ಎಂಬ ಮಹಿಳೆಯೋರ್ವರು ಸೆ.3ರಂದು ನಾಪತ್ತೆಯಾಗಿರುವ ಘಟನೆ ನಡೆದಿದೆ.

ಇವರು ಇಂದು ಬೆಳಗ್ಗೆ ಡಿಪ್ಪಕ್ಕೆ ಹಾಲು ತೆಗೆದುಕೊಂಡು ಹೋಗುತ್ತಿದ್ದ ವೇಳೆ ಯಾರೋ ವಾಹನದಲ್ಲಿ ಬಂದು ಗುದ್ದಿದ್ದು ಅಲ್ಲದೆ ಸ್ಥಳದಲ್ಲೂ ಮಹಿಳೆ ಕಾಣದೆ ನಾಪತ್ತೆಯಾಗಿದ್ದಾರೆ ಎನ್ನಲಾಗಿದೆ.

ಈಗಾಗಲೇ ಕೆಲವು ಆಸ್ಪತ್ರೆಗಳಿಗೆ ವಿಚಾರಿಸಿದರೂ ಯಾವುದೇ ಮಾಹಿತಿ ಲಭ್ಯವಾಗಿಲ್ಲ. ಪೊಲೀಸ್ ಠಾಣೆಯಲ್ಲಿ ದೂರು ನೀಡಲಾಗಿದೆ

Exit mobile version