ಕುತ್ಲೂರು: ಸಾಂದ್ರ ಶೀತಲೀಕರಣ ಘಟಕದ ಉದ್ಘಾಟನಾ ಸಮಾರಂಭ

ಕುತ್ಲೂರು:  ಕುತ್ಲೂರು  ಹಾಲು ಉತ್ಪಾದಕರ ಸಹಕಾರ ಸಂಘದ ವಠಾರದಲ್ಲಿ ಆ.20ರಂದು ಜರುಗಿತು. ಶಾಸಕ ಹರೀಶ್ ಪೂಂಜ ಸಾಂದ್ರ ಶೀತಲೀಕರಣ ಘಟಕದ ಕಟ್ಟಡದ  ಉದ್ಘಾಟನೆಯನ್ನು ನೆರವೇರಿಸಿದರು. ದ.ಕ.ಜಿ.ಹಾ.ಒಕ್ಕೂಟ ನಿ.ಮಂಗಳೂರು ಇದರ ಅಧ್ಯಕ್ಷರಾದ ಕೆ.ಪಿ.ಸುಚರಿತ ಶೆಟ್ಟಿ ಸಾಂದ್ರ ಶೀತಲೀಕರಣ ಘಟಕದ ಉದ್ಘಾಟನೆಯನ್ನು ನೆರವೇರಿಸಿದರು.

ದ,ಕ.ಜಿ.ಹಾ.ಒಕ್ಕೂಟ ನಿ ಮಂಗಳೂರು ನಿರ್ದೇಶಕರಾದ  ಪದ್ಮನಾಭ ಶೆಟ್ಟಿ  ವಿದ್ಯುಜ್ಜನಕದ ಉದ್ಘಾಟನೆ ನೆರವೇರಿಸಿದರು. ಎಸ್.ಕೆ.ಡಿ.ಆರ್.ಡಿ.ಪಿ ಧರ್ಮಸ್ಥಳ ಕಾರ್ಯನಿರ್ವಹಕರಾದ ಡಾ.ಎಲ್.ಎಚ್.ಮಂಜುನಾಥ  ಅಂಗಡಿ ಕೋಣೆ ಉದ್ಘಾಟಿಸಿದರು.

ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಸಕ ಹರೀಶ್ ಪೂಂಜ ಉದ್ಘಾಟನೆಯನ್ನು ನೆರವೇರಿಸಿದರು. ಕುತ್ಲೂರು ಹಾ.ಉ .ಸ.ಸಂಘದ ಅಧ್ಯಕ್ಷರಾದ ತುಂಗಪ್ಪ ಪೂಜಾರಿ ಸಭಾಧ್ಯಕ್ಷತೆಯನ್ನು ವಹಿಸಿದ್ದರು.  ದ.ಕ.ಜಿ.ಹಾ.ಉ ಒಕ್ಕೂಟ ನಿ ಮಂಗಳೂರು ಅಧ್ಯಕ್ಷರಾದ ಕೆ.ಪಿ ಸುಚರಿತ ಶೆಟ್ಟಿ,  ನಿರ್ದೇಶಕರಾದ ಪದ್ಮನಾಭ ಶೆಟ್ಟಿ ಅರ್ಕಜೆ, ನಿರ್ದೇಶಕರಾದ ನಾರಾಯಣ ಪ್ರಕಾಶ್ ಪಾಣಾಜೆ, ನಿರ್ದೇಶಕಿಯಾದ ಶ್ರೀಮತಿ ಸವಿತಾ ಎನ್ ಶೆಟ್ಟಿ, ವ್ಯವಸ್ಥಾಪಕ ನಿರ್ದೇಶಕರಾದ ಡಿ. ಅಶೋಕ,  ಕಾರ್ಯನಿರ್ವಾಹಕ ನಿರ್ದೇಶಕರಾದ ಎಲ್.ಎಚ್ ಮಂಜುನಾಥ, ನಾರಾವಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ  ಆಶಾಲತಾ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.

ದ.ಕ.ಜಿ.ಹಾ.ಉ.ಒಕ್ಕೂಟ ನಿ ಮಂಗಳೂರು ವ್ಯವಸ್ಥಾಪಕರಾದ ನಿತ್ಯಾನಂದ ಭಕ್ತ, ನಾರಾವಿ ಪ್ರಾ.ಕೃ.ಪ.ಸ.ಸಂಘದ  ಅಧ್ಯಕ್ಷರಾದ ಎನ್ ಸುಧಾಕರ ಭಂಡಾರಿ,  ಯೋಜನಾಧಿಕಾರಿ ಯಶವಂತ ಎಸ್, ಜಯಂತ್ ಕೋಟ್ಯಾನ್,  ಶ್ರೀ ಕೊಡಮಣಿತ್ತಾಯ ನಾಡಿ ಸ್ಥಾನ ಕುತ್ಲೂರು ಅಧ್ಯಕ್ಷರಾದ ಎನ್. ಜೀವಂಧರ್ ಕುಮಾರ್, ಶಾಂತನಾಥ ಸ್ವಾಮಿ ಟ್ರಸ್ಟ್ ಕುತ್ಲೂರು ಅಧ್ಯಕ್ಷರಾದ ಕೆ.ಶಶಿಕಾಂತ ಆರಿಗ, ಬೆಳ್ತಂಗಡಿ ದ.ಕ.ಜಿ.ಹಾ.ಉ.ಒಕ್ಕೂಟ ಮಂಗಳೂರು ಉಪ ವ್ಯವಸ್ಥಾಪಕರಾದ ಚಂದ್ರಶೇಖರ್ ಭಟ್, ಹಾ.ಉ.ಸ.ಸಂಘ ಕುತ್ಲೂರು ನಿಕಟಪೂರ್ವ ಅಧ್ಯಕ್ಷರಾದ ತಿಮ್ಮಪ್ಪ ಪೂಜಾರಿ ಉಪಸ್ಥಿತರಿದ್ದರು.

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.