ಲಯನ್ಸ್ ಕ್ಲಬ್ ನಿಂದ ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವದ ದಿನ ಹುಟ್ಟುಹಬ್ಬ ಆಚರಣೆ

ಧರ್ಮಸ್ಥಳ :75 ನೇ ಭಾರತ ಸ್ವಾತಂತ್ರ್ಯ ಅಮೃತಮಹೋತ್ಸವ ದೇಶದಾದ್ಯಂತ ಆಚರಿಸುವ ಈ ಶುಭ ಸಂದರ್ಭದಲ್ಲಿ ಜನಿಸಿದ  ಲೀಲಾವತಿ ಕೂಟದಕಲ್ಲು ಧರ್ಮಸ್ಥಳ ಇವರ ಹುಟ್ಟುಹಬ್ಬವನ್ನು ಅವರ ಮನೆಯಲ್ಲಿ ಲಯನ್ಸ್ ಕ್ಲಬ್ ಬೆಳ್ತಂಗಡಿ ವತಿಯಿಂದ ವಿಶೇಷವಾಗಿ ಗೌರವಪೂರ್ವಕವಾಗಿ ದೀಪ ಬೆಳಗಿಸಿ ಆಚರಿಸಲಾಯಿತು.

ಪ್ರತಿವರ್ಷ ಮನೆಯವರಾದ ನಾವೇ ಸರಳವಾಗಿ ಆಚರಿಸುತ್ತಿದ್ದು ಈ ವರ್ಷ ಲಯನ್ಸ್ ಕ್ಲಬ್ ಬೆಳ್ತಂಗಡಿ ಯಿಂದ ನೀಡಿದ ಗೌರವಕ್ಕೆ ಸಂತೋಷ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಲಯನ್ಸ್ ಕ್ಲಬ್ ಅಧ್ಯಕ್ಷ ಲಯನ್ ಡಾ. ದೇವಿಪ್ರಸಾದ್ ಬೊಲ್ಮ, ಧರ್ಮಸ್ಥಳ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಶ್ರೀಮತಿ ಜಯ ಮೋನಪ್ಪ ಗೌಡ, ಲಯನ್ಸ್ ಕ್ಲಬ್ ಸದಸ್ಯರಾದ ಲೈನ್ ಚಂದ್ರಕುಮಾರ್ ಶೆಟ್ಟಿ ನಾರ್ಯ, ಲಯನ್ ಕೃಷ್ಣ ಶೆಟ್ಟಿ, ಲಯನ್ ಮುರಳಿದರ ದಾಸ್ , ಲಯನ್ ಕಿರಣ್ ಕುಮಾರ್ ಡೊಂಡೋಲೆ, ಊರವರ ಡಿ ಎಸ್ ಬಾಬು, ದಿವಕರ ಗೌಡ, ಗಜಾನನ ದೇವಾಡಿಗ, ಶೇಖರಗೌಡ, ಶೇಖರ್, ಜಗನ್ನಾಥ, ನಾಗರಾಜ, ಮಹಮ್ಮದ್ ಶಾಫಿ, ಹಾಗೂ ಮನೆಯವರು ಉಪಸ್ಥಿತರಿದ್ದರು.

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.