ಶ್ರೀ.ಧ ಮಂ ‌ಶಾಲೆ ಧರ್ಮಸ್ಥಳದಲ್ಲಿ ಸಂಭ್ರಮದ ಸ್ವಾತಂತ್ರ್ಯ ದಿನಾಚರಣೆ

ಧರ್ಮಸ್ಥಳ:  ಶ್ರೀ. ಧರ್ಮಸ್ಥಳ ಮಂಜುನಾಥೇಶ್ವರ ‌ಶಾಲೆ ಧರ್ಮಸ್ಥಳದಲ್ಲಿ ಸಂಭ್ರಮದ ಸ್ವಾತಂತ್ರ್ಯ ದಿನಾಚರಣೆಯನ್ನು ಇಂದು ಆಚರಿಸಲಾಯಿತು ‌.

ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ .ಅನಿಲ್ ಇವರು ಧ್ವಜಾರೋಹಣ ನೆರೆವೇರಿಸಿದರು.

ಶಾಲಾ ಸಂಚಾಲಕರಾದ‌ .ಅನಂತ‌ಪದ್ಮನಾಭ ಭಟ್ ಈ ಕಾರ್ಯಕ್ರಮದ ಜೊತೆಗೂಡಿದ್ದರು.ನಂತರ ಮಾತನಾಡಿದ‌ ಅವರು ದೇಶದ ಬಗ್ಗೆ ಸದಾ ಅಭಿಮಾನವಿರಲಿ.ಇಂದಿನ ಮಕ್ಕಳೇ ಮುಂದಿನ ಪ್ರಜೆಗಳು.ನಿಮ್ಮ ಮೇಲೆ ಅತ್ಯಂತ ಮಹತ್ತರ‌ ಜವಾಬ್ದಾರಿ ‌ಇದೆ.ದೇಶದ ಸಾಮರಸ್ಯ ಉಳಿಸುತ್ತಾ ಸಹಬಾಳ್ವೆಯ‌ ಜೀವನ ನಡೆಸುತ್ತಾ ದೇಶದ ಅಭಿವೃದ್ಧಿಗೆ ಸಹಕರಿಸೋಣ ಎಂದು ನುಡಿದರು.

ತದನಂತರ ಪ್ರೌಢಶಾಲಾ ವಿದ್ಯಾರ್ಥಿಗಳು ದೇಶದ‌ ವಿವಿಧ ಸ್ವಾತಂತ್ರ್ಯ ಹೋರಾಟಗಾರರ ಸಂಸ್ಕ್ರತಿಯನ್ನು ಬಿಂಬಿಸುವ ವೇಷ ಭೂಷಣ ಧರಿಸಿ ಕೈಯಲ್ಲಿ ರಾಷ್ಟ್ರದ ಧ್ವಜವನ್ನು ಹಿಡಿದು ಘೋಷಣೆ ಕೂಗುತ್ತಾ ಜಾಥಾ ಹೊರಟರು.

ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳು ಶಾಲೆಯಲ್ಲಿ ದೇಶ ಪ್ರೇಮ ಬಿಂಬಿಸುವ ಹಾಡು ,ನೃತ್ಯ, ಮೈಮ್ ಶೋ,ನಾಟಕ ಇತ್ಯಾದಿಗಳನ್ನು ಪ್ರದರ್ಶಿಸಿದರು.

ಆ ಸಂದರ್ಭದಲ್ಲಿ ಹಿಂದೆ ಜಮಾಉಗ್ರಾಣದ ಮಾನೇಜರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದ ಭುಜಬಲಿ ಕಾರ್ಯಕ್ರಮಕ್ಕೆ ಜೊತೆಯಾಗಿ ಶಾಲೆಯ ವಾತಾವರಣ ಹಾಗೂ ಮಾಡುವ ಕೆಲಸ ಕಾರ್ಯಗಳ ವೈಖರಿಯ‌ನ್ನು ಶ್ಲಾಘಿಸಿ ಉತ್ತಮ ಪ್ರಜೆಯ ಲಕ್ಷಣ್ ಹಾಗು ವಿದ್ಯಾರ್ಥಿಗಳ ಕರ್ತವ್ಯವನ್ನು ವಿವರಿಸಿದು.

ಜಾಥಾದ ಬಳಿಕ ಮತ್ತೆ ಪ್ರೌಢಶಾಲಾ ವಿದ್ಯಾರ್ಥಿಗಳು ಸಾಂಸ್ಕ್ರತಿಕ ಕಾರ್ಯಕ್ರಮಕ್ಕೆ ಜೊತೆಯಾದರು.ಶಾಲೆ ಧ್ವಜದ‌ ಬಣ್ಣದ ವಿವಿಧ ಚಿತ್ತಾರಗಳಿಂದ ಸಿಂಗಾರಗೊಂಡು ತಾನೂ ದೇಶಭಕ್ತಿಯನ್ನು ಮೆರೆದಿತ್ತು.ಶಾಲಾ ಬ್ಯಾಂಡ್ ‌ಸೆಟ್ ಹಾಗೂ ಸಂಸ್ಕೃತಿಯನ್ನು ಬಿಂಬಿಸೋ ವಸ್ತ್ರವನ್ನು ಧರಿಸಿರುವ ವಿದ್ಯಾರ್ಥಿಗಳು ಅತಿಥಿ ಹಾಗೂ ಅಭ್ಯಾಗತರನ್ನು ಅದ್ದೂರಿಯಾಗಿ ಸ್ವಾಗತಿಸಿದ್ದು ವಿಶೇಷವಾಗಿತ್ತು.

ಕಾರ್ಯಕ್ರಮದ ಕೊನೆಯಲ್ಲಿ ಹೆತ್ತವರೆಲ್ಲರ ಪರವಾಗಿ ಶ್ರೀ. ಸುನಿಲ್ ಕಲ್ಕೊಪ್ಪ ನಿನಾಸಂ ಪದವೀಧರರು ಧರ್ಮಸ್ಥಳ ಇವರು ಕಾರ್ಯಕ್ರಮದ ಕುರಿತು ತನ್ನ ಅಭಿಪ್ರಾಯ ಮಂಡಿಸಿದರು.

ಕುಮಾರಿ ಹರಿಣಿ ಹಾಗೂ ಕುಮಾರಿ ಸ್ಪೂರ್ತಿ ನಿರ್ವಹಿಸಿದ‌ ಕಾರ್ಯಕ್ರಮದಲ್ಲಿ ಶಾಲಾ ಮುಖ್ಯೋಪಾಧ್ಯಾಯಿನಿ ಪರಿಮಳ‌ಎಂ.ವಿ‌ ಸ್ವಾಗತಿಸಿ ಕುಮಾರಿ ಧನ್ಯ ಧನ್ಯವಾದವಿತ್ತರು.ಶಾಲಾ ಶಿಕ್ಷಕ ಹಾಗೂ ಶಿಕ್ಷಕೇತರ‌ ಸಿಬ್ಬಂದಿಗಳು,ವಿದ್ಯಾರ್ಥಿ ಹೆತ್ತವರು ‌ಮತ್ತು ವಿದ್ಯಾರ್ಥಿಗಳು ಈ ಕಾರ್ಯಕ್ರಮದ‌‌ ಸಾಕ್ಷಿಗಳಾದರು.

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.