ಬೆಳ್ತಂಗಡಿ: ಹೋಲಿ ರಿಡೀಮರ್ ಶಾಲೆ ಹಾಗೂ ಚರ್ಚ್ ಹಿ.ಪ್ರಾ. ಶಾಲೆ ಸಹಭಾಗಿತ್ವದಲ್ಲಿ ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವ ಆಚರಣೆ

ಹೋಲಿ ರಿಡೀಮರ್ ಚರ್ಚ್, ಹೋಲಿ ರಿಡೀಮರ್ ಆಂಗ್ಲ ಮಾಧ್ಯಮ ಶಾಲೆ ಮತ್ತು ಚರ್ಚ್ ಹಿರಿಯ ಪ್ರಾಥಮಿಕ ಶಾಲೆ ಬೆಳ್ತಂಗಡಿಯ ಸಹಭಾಗಿತ್ವದಲ್ಲಿ ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವವನ್ನು ಆಗಸ್ಟ್ 15ರಂದು ಸಂಭ್ರಮದಿಂದ ಆಚರಿಸಲಾಯಿತು.

ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸಿದ ದಯಾಳ್ ಬಾಗ್ ಆಶ್ರಮದ ನಿರ್ದೇಶಕರಾದ ವಂ. ಫಾ. ಫೆಡ್ರಿಕ್ ಬ್ರ್ಯಾಕ್ಸ್ ರವರು ಧ್ವಜಾರೋಹಣವನ್ನು ನೆರವೇರಿಸಿ ಭಾರತೀಯರಾದ ನಾವು ಯಾವುದೇ ಧರ್ಮದ ಚೌಕಟ್ಟಿಗೆ ಒಳಗಾಗದೆ ಒಂದೇ ಮನದಿಂದ ಒಗ್ಗಟ್ಟಿನಿಂದ ಬಾಳಿ ಭಾರತವನ್ನು ರಕ್ಷಿಸಬೇಕೆಂದು ಕರೆ ನೀಡಿದರು. ಶಾಲಾ ಸಂಚಾಲಕ ವಂ. ಫಾ. ಜೋಸೆಫ್ ಕಾರ್ಡೋಜರವರು 75ನೇ ಸ್ವಾತಂತ್ರ್ಯೋತ್ಸವಕ್ಕೆ ಶುಭಾಶಯವನ್ನು ಕೋರಿ ಆಶೀರ್ವದಿಸಿದರು.

ವಿದ್ಯಾರ್ಥಿನಿಯರು ದೇಶಭಕ್ತಿ ಗೀತೆಯನ್ನು ಹಾಡಿದರು. ಶಾಲಾ ವಾದ್ಯ ತಂಡದವರು ಕವಾಯತ್ತಿನ ಜೊತೆಗೆ ರಾಷ್ಟ್ರಧ್ವಜಕ್ಕೆ ಗೌರವವನ್ನು ಸಲ್ಲಿಸಿದರು. ಉಭಯ ಶಾಲೆಗಳ ವಿದ್ಯಾರ್ಥಿಗಳು ಶಾಲಾ ವಠಾರದಲ್ಲಿ ನಡೆದ ಪಥಸಂಚಲನದಲ್ಲಿ ಪಾಲ್ಗೊಂಡು, ಶಿಸ್ತಿನ ಸಿಪಾಯಿಗಳಂತೆ ಸ್ವಾತಂತ್ರ್ಯದ ಘೋಷಣೆಗಳನ್ನು ಕೂಗುತ್ತಾ ದೇಶಪ್ರೇಮವನ್ನು ಮೆರೆದರು. ಕಾರ್ಯಕ್ರಮದಲ್ಲಿ ಹೋಲಿ ರಿಡೀಮರ್ ಶಾಲಾ ಮುಖ್ಯೋಪಾಧ್ಯಾಯರಾದ ವಂ. ಫಾ. ಕ್ಲಿಫರ್ಡ್ ಪಿಂಟೋ, ಚರ್ಚ್ ಶಾಲಾ ಮುಖ್ಯೋಪಾಧ್ಯಾಯಿನಿ ಶ್ರೀಮತಿ ರೆನ್ನಿ ವಾಸ್, ಚರ್ಚ್ ಪಾಲನಾ ಮಂಡಳಿಯ ಕಾರ್ಯದರ್ಶಿ ಶ್ರೀಮತಿ ಪೌಲಿನ್ ರೇಗೊ ಹಾಗೂ ಚರ್ಚ್ ನ 21 ಆಯೋಗಗಳ ಸಂಯೋಜಕ ವಿನ್ಸೆಂಟ್ ಡಿಸೋಜರವರು ಉಪಸ್ಥಿತರಿದ್ದರು. ವಿದ್ಯಾರ್ಥಿಗಳು, ಪೋಷಕರು ಹಾಗೂ ಅಪಾರ ಸಂಖ್ಯೆಯಲ್ಲಿ ನೆರೆದಿದ್ದ ದೇಶಾಭಿಮಾನಿಗಳು ಕಾರ್ಯಕ್ರಮಕ್ಕೆ ಸಾಕ್ಷಿಯಾದರು. ವಿದ್ಯಾರ್ಥಿನಿಯರಾದ ಪ್ರತೀಕ್ಷಾ ದೊಡಮನಿ ಸ್ವಾಗತಿಸಿ, ಭಕ್ತಿ ವಂದಿಸಿ ಮತ್ತು ವಿಯೋನ ರೇಗೊ ಕಾರ್ಯಕ್ರಮ ನಿರ್ವಹಿಸಿದರು.

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.