ಉಜಿರೆ ಶ್ರೀ ಧ. ಮಂ. ಸೆಕೆಂಡರಿ ಶಾಲೆಯಲ್ಲಿ ಸ್ವಾತಂತ್ರ್ಯ ಅಮೃತ ಮಹೋತ್ಸವ ಆಚರಣೆ 

ಉಜಿರೆ : ಸ್ವಾತಂತ್ರ್ಯ ಅಮೃತ ಮಹೋತ್ಸವದ ಆಚರಣೆಯ ಪುಯುಕ್ತ ಧ್ವಜಾರೋಹಣ ಹಾಗೂ ಕಾಲ್ನಡಿಗೆ ಜಾಥಾವನ್ನು ಆ .13 ರಂದು ಆಯೋಜಿಸಲಾಯಿತು.

ಶ್ರೀ ಧ. ಮಂ. ಶಿಕ್ಷಣ ಸಂಸ್ಥೆಗಳ ಕಾರ್ಯ ವಿರ್ವಹಣಾಧಿಕಾರಿ ಹರೀಶ್ ಆಗಮಿಸಿ ಧ್ವಜಾರೋಹಣ ಮಾಡಿ ವಿದ್ಯಾರ್ಥಿಗಳಿಗೆ ದೇಶಾಭಿಮಾನ ಮೂಡಿಸುವ ಮಾತುಗಳನ್ನಾಡಿದರು. ಶ್ರೀ ಧ.ಮಂ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿ ಕ್ಷೇಮ ಪಾಲನಾಧಿಕಾರಿ ಸೋಮಶೇಖರ ಶೆಟ್ಟಿ, ವಿದ್ಯಾರ್ಥಿಗಳಿಗೆ ಶುಭಕೋರಿದರು. ಶಾಲಾ ಹೊರ ಆವರಣದಲ್ಲಿ ಧ್ವಜ ಹಾರಿಸಿ ಗೌರವಿಸಿ ವಿದ್ಯಾರ್ಥಿಗಳ ಕಾಲ್ನಾಡಿಗೆ ಜಾಥಾದ ಉದ್ಘಾಟನೆಯನ್ನು ಮಹಾವೀರ ಏಜೆನ್ಸಿಯ ಮಾಲಕ ಪುಭಾಕರ್ ಹೆಗಡೆ ದಂಪತಿಗಳು ನಡೆಸಿ ಕಾಲ್ನಡಿಗೆ ಜಾಥಾಕ್ಕೆ ಚಾಲನೆ ನೀಡಿದರು, ಶಿಕ್ಷಕ ರಾಧಾಕೃಷ್ಣ ನಿರ್ವಹಿಸಿದ ಕಾರ್ಯಕ್ರಮದಲ್ಲಿ ಶ್ರೀ ಪದ್ಮರಾಜ್ ಇವರು ವಂದಿಸಿದರು. ಶಾಲಾ ಮುಖ್ಯೋಪಾಧ್ಯಾಯ ಸದಾಶಿವ ಪೂಜಾರಿ , ಶಿಕ್ಷಕ ವೃಂದ ಹಾಗೂ ವಿದ್ಯಾರ್ಥಿ ವೃಂದ, ಬೋಧಕೇತರ ವೃಂದದವರು ಮತ್ತು ಶ್ರೀ ಧ. ಮಂ. ಕಾಲೇಜಿನ ಬ್ಯಾಂಡ್ ಸೆಟ್ ಕಾಲ್ನಾಡಿಗೆ ಜಾಥಾದಲ್ಲಿ ಪಾಲ್ಗೊಂಡು ಶಾಲೆಯಿಂದ ಹೊರಟ ಜಾಥಾವು ಘೋಷವಾಕ್ಯಗಳನ್ನು ಕೂಗುತ್ತಾ ಉಜಿರೆಯ ವೃತ್ತ ಸುತ್ತುವರೆದು ಮರಳಿ ಶಾಲೆಗೆ ಬರುವುದರ ಮೂಲಕ ಯಶಸ್ವಿಯಾಯಿತು.ಪ್ರಭಾಕರ ಹೆಗ್ಡೆ ದಂಪತಿ ಕಾರ್ಯಕ್ರಮದ ಪ್ರಾಯೋಜಕತ್ವ ಮಾಡಿದರು.

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.