ಧರ್ಮಸ್ಥಳ ಖಾಸಗಿ ಲಾಡ್ಜ್ ಬುಕ್ಕಿಂಗ್ ಗೆ ಬಂದ ಅನ್ಯಮತೀಯ ಜೋಡಿ: ಕೊಕ್ಕಡದಲ್ಲಿ ಜೋಡಿಯನ್ನು ಪೊಲೀಸರಿಗೊಪ್ಪಿಸಿದ ಹಿಂದೂ ಕಾರ್ಯಕರ್ತರು

ಕೊಕ್ಕಡ: ಬೆಳ್ತಂಗಡಿ ತಾಲೂಕಿನ ಕೊಕ್ಕಡ ಸಮೀಪ ಅನ್ಯ ಕೋಮಿನ ಜೋಡಿಯನ್ನು ಕೊಕ್ಕಡ ಹಿಂದೂ ಕಾರ್ಯಕರ್ತರು  ಕಾಪಿನ ಬಾಗಿಲು ಪ್ರದೇಶದಲ್ಲಿ ಹಿಡಿದು ಪೊಲೀಸರಿಗೆ ಒಪ್ಪಿಸಿದ ಘಟನೆ ಆ.12 ರಂದು ಮುಂಜಾನೆ ಬೆಳಕಿಗೆ ಬಂದಿದೆ.

ಯುವಕ ಗದಗ ಮೂಲದ ರಫಿಕ್(21) ಎಂದು ತಿಳಿದುಬಂದಿದೆ.

ಆತ ಗದಗದ ಹಿಂದೂ ಯುವತಿಯನ್ನು ಧರ್ಮಸ್ಥಳಕ್ಕೆ ಕರೆ ತಂದಿದ್ದು ಖಾಸಗಿ ಲಾಡ್ಜ್ ಬುಕ್ಕಿಂಗ್ ಗಾಗಿ ಬಂದಿರುತ್ತಾರೆ. ನವ ವಿವಾಹಿತ ಅನ್ಯ ಮತೀಯ ಜೋಡಿ ಎಂದು ತಿಳಿದ ಕೂಡಲೇ ಲಾಡ್ಜ್ ಸಿಬ್ಬಂದಿಯು ರೂಮ್ ನೀಡಲು ನಿರಾಕರಿಸಿದ್ದಾರೆ.

ತಕ್ಷಣ ಅಲ್ಲಿಂದ ಮರಳಿ ಬೆಂಗಳೂರು ಕಡೆಗೆ ಎಸ್ಕೇಪ್  ಆಗಲು ಬಸ್ ಹತ್ತಿದ್ದಾರೆ. ಆಗ ವಾಪಸ್ ಹೋಗುವ ವೇಳೆ ಕೊಕ್ಕಡದಲ್ಲಿ ಸುದ್ದಿ ತಿಳಿದ ಹಿಂದೂ ಕಾರ್ಯಕರ್ತರು ಜಮಾವಣೆ ಆಗಿದ್ದಾರೆ. ಕೊಕ್ಕಡ ಪಕ್ಕ ಬಸ್ ನಿಲ್ಲಿಸಿ ಅನ್ಯ ಕೋಮಿನ ಜೋಡಿಯನ್ನು ಹಿಡಿದಿದ್ದಾರೆ. ನಂತರ ಜೋಡಿಯನ್ನು ನೆಲ್ಯಾಡಿ ಪೊಲೀಸರಿಗೆ ಒಪ್ಪಿಸಿದ್ದಾರೆ.

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.