ಮಡಂತ್ಯಾರು : ಸೇಕ್ರೆಡ್ ಹಾರ್ಟ್ ಕಾಲೇಜಿನಲ್ಲಿ ಸ್ವಾತಂತ್ರ್ಯ ಭಾರತದ ಅಮೃತ ಮಹೋತ್ಸವದ ವಿವಿಧ ಚಟುವಟಿಕೆಗಳ ಉದ್ಘಾಟನೆ

ಮಡಂತ್ಯಾರು : ಸೇಕ್ರೆಡ್ ಹಾರ್ಟ್ ಕಾಲೇಜು ,ರಾಷ್ಟ್ರೀಯ ಸೇವಾ ಯೋಜನೆ ,ಯೂತ್ ರೆಡ್ ಕ್ರಾಸ್ ,ರೋವರ್ಸ್ ಮತ್ತು ರೇಂಜರ್ಸ್ ಹಾಗೂ ಎನ್.ಸಿ.ಸಿ ಘಟಕದ ವತಿಯಿಂದ ನಡೆದ ಸ್ವಾತಂತ್ರ್ಯ ಭಾರತದ ಅಮೃತ ಮಹೋತ್ಸವ ( ಅಜಾದಿ ಕಾ ಅಮೃತ್ ಮಹೋತ್ಸವ್ ) ದ ವಿವಿಧ ಚಟುವಟಿಕೆಗಳ ಉದ್ಘಾಟನಾ ಕಾರ್ಯಕ್ರಮವು ಕಾಲೇಜಿನ ಸಭಾಂಗಣದಲ್ಲಿ ನಡೆಯಿತು.

ಕಾರ್ಯಕ್ರಮವನ್ನು ಕಾಲೇಜಿನ ಪ್ರಾಂಶುಪಾಲರಾದ ಡಾ ಜೋಸೆಫ್ ಎನ್.ಎಮ್ ಅವರು ಉದ್ಘಾಟಿಸಿದರು .ಮುಖ್ಯ ಅತಿಥಿಗಳಾಗಿ ಅಗಮಿಸಿದ ವಿದ್ಯಾರ್ಥಿ ಕ್ಷೇಮಪಾಲನಾ ಅಧಿಕಾರಿ ಮತ್ತು ಕಾಲೇಜಿನ ಸಮಾಜಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಪ್ರೋ.ಪ್ರಕಾಶ್ ಕ್ರಮಧಾರಿ. ಅವರು ವಿದ್ಯಾರ್ಥಿಗಳನ್ನು ಉದ್ದೇಶೀಸಿ ಮಾತನಾಡಿದರು .ಸ್ವಾತಂತ್ರ್ಯ ವೆಂಬುದು ನಮ್ಮ ಹಿರಿಯರ ತ್ಯಾಗ ಬಲಿದಾನವನ್ನು ನೆನೆಯುವ ಒಂದು ಸುಸಂಧರ್ಬ ಎಂದು ಅವರು ಅಭಿಪ್ರಾಯಪಟ್ಟರು ಕಾರ್ಯಕ್ರಮದಲ್ಲಿ ಎನ್.ಎಸ್.ಎಸ್ ನ ಯೋಜನಾಧಿಕಾರಿಗಳಾದ ಪ್ರೊ.ಪ್ರಶಾಂತ್ ಮತ್ತು ಪ್ರೊ.ಅರುಣ್ , ಎನ್.ಸಿ.ಸಿ.ಯ ಲೆಫ್ಟಿನೆಂಟ್ ಅಲ್ವಿನ್ ಕೆ.ಜಿ ,ರೋವರ್ಸ್ ಮತ್ತು ರೇಂಜರ್ಸ್ ನ ಪ್ರೊ.ಶ್ರೀನಾಧ್ ಬಿ.ಎಸ್,ಯೂತ್ ರೆಡ್ ಕ್ರಾಸ್ ನ ಪ್ರೊ .ಜನಾರ್ದನ ರಾವ್ .ವೇದಿಕೆಯಲ್ಲಿ ಉಪಸ್ಥಿತರಿದ್ದರು .ವಿದ್ಯಾರ್ಥಿಗಳಾದ ರೊನ್ಸನ್ ಕ್ರಾಸ್ತಾ ಸ್ವಾಗತಿಸಿದರು ,ನಿಮಿತಾ ವಂದಿಸಿದರು ಮತ್ತು ಸಿಂಥಿಯಾ ಕಾರ್ಯಕ್ರಮವನ್ನು ನಿರೂಪಿಸಿದರು.

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.