ವಕ್ಫ್ ಜಿಲ್ಲಾ ಉಪಾಧ್ಯಕ್ಷ ಪಕೀರಬ್ಬ ಮರೋಡಿ ಅವರಿಂದ ಹೆಗ್ಗಡೆಯವರಿಗೆ ಗೌರವಾರ್ಪಣೆ

ಬೆಳ್ತಂಗಡಿ: ರಾಜ್ಯ ಸಭೆಗೆ ನಾಮನಿರ್ದೇಶನಗೊಂಡ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ ವೀರೇಂದ್ರ ಹೆಗ್ಗಡೆಯವರನ್ನು
ಕರ್ನಾಟಕ ವಕ್ಫ್ ಮಂಡಳಿಯ ಜಿಲ್ಲಾ ಉಪಾಧ್ಯಕ್ಷರೂ ಆಗಿರುವ, ಮಾಸ್ಟರ್ ಫ್ಲವರ್ಸ್ ಮಂಗಳೂರು ಮಾಲಕ, ಸಮಾಜ ಸೇವಕರು ಮತ್ತು ಉದ್ಯಮಿಯಾಗಿರುವ ಪಕೀರಬ್ಬ ಮರೋಡಿ ಅವರು ಗೌರವಿಸಿದರು.
ವೇಣೂರು ಸಹಕಾರಿ ಸಂಘದ ನಿವೃತ ಸಿಇಒ, ಪತ್ರಕರ್ತ ಎಚ್ ಮುಹಮ್ಮದ್ ವೇಣೂರು ಇವರು ಉಪಸ್ಥಿತರಿದ್ದರು.
ಪಕೀರಬ್ಬ ಮರೋಡಿ ಅವರು ಯಶಸ್ವಿ ಉದ್ಯಮಿಯಾಗಿದ್ದು ಶ್ರವಣ ಬೆಳಗೊಳ ಮತ್ತು ಧರ್ಮಸ್ಥಳ ಮಹಾಮಸ್ತಕಾಭಿಷೇಕ ಸಂದರ್ಭದಲ್ಲಿ ತಮ್ಮ ಮಾಸ್ಟರ್ ಫ್ಲವರ್ಸ್ ಸಂಸ್ಥೆಯ ಮೂಲಕ ಹೂವಿನ ಅಲಂಕಾರದ ವ್ಯವಸ್ಥೆಯ ಜವಾಬ್ಧಾರಿ ಹೊತ್ತಿದ್ದರು. ಈ ಸಂದರ್ಭದಲ್ಲಿ ಪ್ರಾಕೃತಿಕ ಹೂವುಗಳುಳ್ಳ ವಿಶೇಷ ಅಲಂಕಾರದ ಬೊಕ್ಕೆಯನ್ನು ಅವರು ಹೆಗ್ಗಡೆಯವರಿಗೆ ಹಸ್ತಾಂತರಿಸಿದರು.

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.