ಗೌಡರ ಯಾನೆ ಒಕ್ಕಲಿಗರ ಸಂಘ, ಗ್ರಾಮ ಸಮಿತಿ ಮಚ್ಚಿನ ಆಟಿಡೊಂಜಿ ಗೌಡರ ಗೌಜಿ ಕಾರ್ಯಕ್ರಮ

ಮಚ್ಚಿನ:  ಗೌಡರ ಯಾನೆ ಒಕ್ಕಲಿಗರ ಸಂಘ ಗ್ರಾಮ ಸಮಿತಿ ಮಚ್ಚಿನ ಹಾಗೂ ಯುವ ವೇದಿಕೆ ಮಚ್ಚಿನ ಇವೆರಡರ ಜಂಟಿ ಆಶ್ರಯದಲ್ಲಿ ಆಟಿಡೊಂಜಿ ಗೌಡರ ಗೌಜಿ ಎಂಬ ಕಾರ್ಯಕ್ರಮವು ಆ.7ರಂದು ನಡೆಯಿತು.

ಬೆಳಿಗ್ಗೆ 9 ಗಂಟೆಗೆ ಸಂಘದ ಹಿರಿಯರಿಂದ ಉದ್ಘಾಟನೆಗೊಂಡು, ಮಕ್ಕಳಿಗೆ, ಮಹಿಳೆಯರಿಗೆ, ಹಾಗೂ ಪುರುಷರಿಗೆ ವಿವಿಧ ಬಗೆಯ ಆಟೋಟ ಸ್ಪರ್ಧೆಗಳನ್ನು ಆಯೋಜಿಸಿ, ಮಧ್ಯಾಹ್ನದ ಭೋಜನದ ನಂತರ ಸಮಾರೋಪ- ಸಮಾರಂಭ ಕಾರ್ಯಕ್ರಮದಲ್ಲಿ ಸ್ಪರ್ಧೆಯ ಬಹುಮಾನ ವಿತರಣೆ ಹಾಗೂ 1 ನೇ ತರಗತಿಯಿಂದ ಪಿಯುಸಿ ವರೆಗಿನ ಕಲಿಕೆಯಲ್ಲಿ ಹೆಚ್ಚು ಅಂಕ ಪಡೆದ ಎಲ್ಲಾ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು.

ಈ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಶ್ರೀ ಗುಡ್ಡಪ್ಪ ಗೌಡ ಬಲ್ಯ ಇವರು ಆಟಿ ತಿಂಗಳ ವಿಶೇಷತೆ, ಗೌಡ ಜಾತಿಯ ಕಟ್ಟು ಕಟ್ಟಳೆ, ರೀತಿ ರಿವಾಜುಗಳ ಬಗ್ಗೆ ಸಂಕ್ಷೀಪ್ತವಾಗಿ ಮಾತನಾಡಿದರು. ವಿಶೇಷವಾಗಿ ಸ್ವಾತಂತ್ರೋತ್ಸವದ ಅಮೃತ ಮಹೋತ್ಸವ ಆಚರಿಸುವ ಸಲುವಾಗಿ ಬಂದಂತಹ ಪ್ರತಿಯೊಬ್ಬರಿಗೂ ರಾಷ್ಟ್ರದ್ವಜ ವನ್ನು ಸಂಘದ ವತಿಯಿಂದ ವಿತರಿಸಲಾಯಿತು.

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.