ಸಮನ್ವಯ ವಿವಿದೋದ್ದೇಶ ಕೋಆಪರೇಟಿವ್ ಸೊಸೈಟಿ ವಾರ್ಷಿಕ ಮಹಾಸಭೆ ಸದಸ್ಯರಿಗೆ 24% ಡಿವಿಡೆಂಟ್

ಮಡಂತ್ಯಾರು: ಸಮನ್ವಯ ವಿವಿದೋದ್ದೇಶ ಕೋ-ಆಪರೇಟಿವ್ ಸೊಸೈಟಿಯ 2021-22 ಸಾಲಿನ ಮಹಾಸಭೆಯು ಆ.7ರಂದು ಸಮನ್ವಯ ಸಭಾಂಗಣದಲ್ಲಿ ಜರಗಿತು.
ಸಂಸ್ಥೆಯ ಅಧ್ಯಕ್ಷರಾದ ಮ್ಯಾಕ್ಸಿಮ್ ಕಾರ್ಲ್ ಸಭೆಯ ಅಧ್ಯಕ್ಷತೆ ವಹಿಸಿ ಸದಸ್ಯರ, ಗ್ರಾಹಕರ, ಹಿತೈಷಿಗಳ ಸಹಕಾರ ಹಾಗೂ ಮಾರ್ಗದರ್ಶನದೊಂದಿಗೆ ಸೊಸೈಟಿಯ ಪ್ರಗತಿಯನ್ನು ಕಾಣುತ್ತಿದೆ ಎಂದರು. ಸಮನ್ವಯ ಸಹಕಾರ ಸಂಸ್ಥೆಯಲ್ಲಿ ಒಟ್ಟು 2166 ಸದಸ್ಯರಿದ್ದು ಸದಸ್ಯರಿಗೆ ಅಡಮಾನ
ಸಾಲ,ವೈಯಕ್ತಿಕ ಸಾಲ, ಆಭರಣ ಈಡಿನ ಸಾಲ, ವಾಹನ ಖರೀದಿ ಸಾಲ, ಗೃಹ ಸಾಲ, ಗೃಹೋಪಯೋಗಿ ವಸ್ತು ಖರೀದಿ ಸಾಲ ಹಾಗೆಯೇ ಅಭಿವೃದ್ಧಿಶೀಲ ಯೋಜನೆಗಳನ್ನು ರೂಪಿಸಿ ಸೇವಾ ಹಾಗೂ ಸಹಕಾರ ಮನೋಭಾವದಿಂದ ಮುನ್ನಡೆಯುತ್ತಿದೆ; ಪ್ರಧಾನ ಕಚೇರಿ ಹಾಗೂ ಮುರ್ಜೆ ಶಾಖೆ ಸ್ವಂತ ಕಟ್ಟಡ ಮತ್ತು ಖರ್ಚಿನ ಹೊರತಾಗಿಯೂ ಸದಸ್ಯರಿಗೆ 24% ಡಿವಿಡೆಂಟ್ ಘೋಷಿಸಿದರು.

 

ಮುಖ್ಯ ಕಾರ್ಯನಿರ್ವಹಣಾಧಿಕಾರಿಜೋನ್ ಎಂ. ಡಿಸೋಜಾ ಲೆಕ್ಕಪತ್ರ ಮಂಡಿಸಿದರು. ನಿರ್ದೇಶಕರಾದ ಜೂಲಿಯನ ಅಂದ್ರಾದೆ,ಜೆ. ಆರ್ ಡಿಸೋಜ, ಎಲೇರಿಯನ್ ಸೇರಾ ವೋ ಸಿಲ್ವಸ್ಟರ್ ಪಿಂಟೋ, ಎಲೇರಿಯನ್ ವಿಕ್ಟರ್, ವಿನ್ಸ0ಟ್ ಡಿಸೋಜ, ಮಾರ್ಸೆಲ್ ಡಿಸೋಜ, ಜೆನೆವಿವ್ ರೋಡ್ರಿಗಸ್ ಉಪಸ್ಥಿತರಿದ್ದರು. ಇದೇ ವೇಳೆ ಸಂಸ್ಥೆಯಲ್ಲಿ ಸಹಾಯಕರಾಗಿ 18 ವರ್ಷಗಳ ಕಾಲ ಸೇವೆ ನೀಡಿ ನಿವೃತ್ತಿ ಹೊಂದಿದ ಶ್ರೀ ಎಲೇರಿಯಲ್ ಪ್ರಾಂಕ್ ಇವರಿಗೆ ಫಲಪುಷ್ಪ ನೀಡಿ ಶಾಲು ಹೊದಿಸಿ ಸನ್ಮಾನಿಸಲಾಯಿತು. ಹಾಗೂ ಇತ್ತೀಚೆಗೆ ನಿಧನರಾದ ರೋಷನ್ ಸೆರಾ ಮತ್ತು ಎಲೆರಿಯನ್ ಫೆರ್ನಾಂಡಿಸ್ ಇವರ ಕುಟುಂಬಕ್ಕೆ ತಲಾ ರೂಪಾಯಿ ರೂ.5000/- ಸಹಾಯಧನ ನೀಡಲಾಯಿತು. ಉಪಾಧ್ಯಕ್ಷೆ ಶ್ರೀಮತಿ ಜುಲಿಯಾನ ಅಂದ್ರಾದೆ ವಂದಿಸಿದರು.

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.