ವೇಣೂರಿನ ಹಿರಿಯ ಯಕ್ಷಗಾನ ಕಲಾವಿದ ಸದಾಶಿವ ಕುಲಾಲ್‌ಗೆ ಸನ್ಮಾನ

ವೇಣೂರು: ಕರ್ನಾಟಕ ಸರಕಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಸಾರಥ್ಯದಲ್ಲಿ ಮಂಗಳೂರಿನ ಉರ್ವಸ್ಟೋರ್ ತುಳುಭವನದಲ್ಲಿ ಜರಗಿದ ತುಳು ಯಕ್ಷ ಜಾತ್ರೆ ಕಾರ್ಯಕ್ರಮದಲ್ಲಿ ವೇಣೂರಿನ ಹಿರಿಯ ಯಕ್ಷಗಾನ ಕಲಾವಿದ ಸದಾಶಿವ ಕುಲಾಲ್ ಅವರನ್ನು ಸಮ್ಮಾನಿಸಿ ಗೌರವಿಸಲಾಯಿತು. ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ದಯಾನಂದ ಕತ್ತಲ್‌ಸಾರ್ ಹಾಗೂ ಮತ್ತಿತರ ಗಣ್ಯರು ಉಪಸ್ಥಿತರಿದ್ದರು.

ಸದಾಶಿವ ಕುಲಾಲ್ ಅವರು ಶ್ರೀ ಕ್ಷೇತ್ರ ಧರ್ಮಸ್ಥಳ ಲಲಿತಾ ಕಲಾ ಕೇಂದ್ರದಲ್ಲಿ ಗುರು ಪಡ್ರೆ ಚಂದ್ರು ಅವರಿಂದ ನಾಟ್ಯಾಭ್ಯಾಸ ಪಡೆದು ಸುರತ್ಕಲ್ ಮೇಳಕ್ಕೆ ಪಾದರ್ಪಾಣೆಗೈದರು. ಇದರಲ್ಲಿ ೨೬ ವರ್ಷಗಳ ಕಾಲ ಸೇವೆ ನೀಡಿ ಬಳಿಕ ಮಂಗಳಾದೇವಿ ಮೇಳದಲ್ಲಿ ೮ ವರ್ಷ ಹಾಗೂ ಹೊಸನಗರ-ಹನುಮಗಿರಿ ಮೇಳದಲ್ಲಿ ೧೬ ವರ್ಷಗಳಿಂದ ಒಟ್ಟು ೫೦ ವರ್ಷಗಳಿಂದ ಪುಂಡುವೇಷಧಾರಿಯಾಗಿ ಸೇವೆ ಸಲ್ಲಿಸುತ್ತಾ ಬಂದಿದ್ದಾರೆ. ಅಭಿಮನ್ಯು, ಬಬ್ರುವಾಹನ, ಅಶ್ವತ್ಥಾಮ, ಬಪ್ಪನಾಡುಕ್ಷೇತ್ರ ಮಹಾತ್ಮೆಯ ಗುಳಿಗ, ಕೋಟಿ ಚೆನ್ನಯ್ಯದ ಚೆನ್ನಯ್ಯೆ ಹೀಗೆ ತುಳು-ಕನ್ನಡ ಯಕ್ಷಗಾನಗಳಲ್ಲಿ ಕಥಾ ನಾಯಕನಾಗಿ, ಕಲಾ ನಾಯಕನಾಗಿ ಸಮರ್ಥವಾಗಿ ಪಾತ್ರವನ್ನು ನಿರ್ವಹಿಸಿದ ಹೆಗ್ಗಳಿಕೆ ಇವರದು.

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.