ಕೊಕ್ಕಡ: ಸ.ಕಿ.ಪ್ರಾ.ಶಾಲೆ ಮೂಂಡುಾರು ಪಳಿಕ್ಕೆಯಲ್ಲಿ 75ನೇ ವರ್ಷದ ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಶ್ರಮದಾನ

ಕೊಕ್ಕಡ: ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಮೂಂಡುಾರು ಪಳಿಕ್ಕೆಯಲ್ಲಿ 75 ನೇ ವರ್ಷದ ಸ್ವಾತಂತ್ರ್ಯ ದಿನಾಚರಣೆಯ ಆಮ್ರತ ಮಹೋತ್ಸವ ಆಚರಿಸುವ ಸಲುವಾಗಿ ಇಂದು ಶಾಲಾ ವಠಾರ ಮತ್ತು ರಸ್ತೆಯ ಇಕ್ಕಲಗಳನ್ನು ಶ್ರಮದಾನದ ಮೂಲಕ ಸ್ವಚ್ಛತಾ ಕಾರ್ಯಕ್ರಮ ಕೈಗೊಳ್ಳಲಾಯಿತು.

ಈ ಸಂದರ್ಭದಲ್ಲಿ ಕೊಕ್ಕಡ ಗ್ರಾಮ ಪಂಚಾಯತ್ ಸದಸ್ಯರಾದ ವಿಶ್ವನಾಥ ಕಕ್ಕುದೋಳಿ, ಶ್ರೀಮತಿ ಪ್ರಮೀಳಾ ಮತ್ತು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕೊಕ್ಕಡ ವಲಯದ ಮೇಲ್ವಿಚಾರಕರಾದ ಮಮತಾ, ಸೇವಾ ಪ್ರತಿನಿಧಿ ಲಾವಣ್ಯ, ಸ್ವಸಹಾಯ ಸಂಘಗಳ ಸದಸ್ಯರು ಮತ್ತು ಎಸ್ ಡಿ ಎಮ್ ಸಿ ಆಧ್ಯಕ್ಷರಾದ ವಿಠಲ ಗೌಡ ತೆಂಕುಬೈಲು,ಎಸ್ ಡಿ ಎಮ್ ಸಿ ಯ ಉಪಾಧ್ಯಕ್ಷರಾದ ನೋಣಯ್ಯ ಸಂಕುಬೈಲು, ಎಸ್ ಡಿ ಎಮ್ ಸಿ ಸದಸ್ಯರಾದ ಪ್ರಶಾಂತ್ ಮಿತ್ತಡ್ಕ, ಕಮಲಾಕ್ಷ ಬದಿಜಾಲು ಮತ್ತು ಸದಸ್ಯರು ಹಾಗೂ ಹಳೇ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ಗಣೇಶ್ ತೆಂಕುಬೈಲು, ಮತ್ತು ಸದಸ್ಯರು ಹಾಗೂ ಸೌತಡ್ಕ ಮಹಾಗಣಪತಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಸದಸ್ಯರಾದ ವಿಠಲ ಕುರ್ಲೆ, ಎಸ್ ಡಿ ಎಮ್ ಸಿ ಯ ಮಾಜಿ ಆಧ್ಯಕ್ಷರಾದ ಬಾಬು ಪಿತ್ತಿಲಕೋಡಿ, ಊರಿನ ಎಲ್ಲಾ ವಿದ್ಯಾಭಿಮಾನಿಗಳೊಂದಿಗೆ ಸುಮಾರು 75 ಜನರು ಬಾಗವಹಿಸಿ ಸ್ವಚ್ಛತಾ ಕಾರ್ಯಕ್ರಮ ಯಶಸ್ವಿಗೊಳಿಸಿದ್ದಾರೆ.

ಶ್ರಮದಾನಕ್ಕೆ ಬಾಗವಹಿಸಿದ ಎಲ್ಲಾ ಸದಸ್ಯರಿಗೆ ಶಾಲೆಯ ಪರವಾಗಿ ಮುಖ್ಯೋಪಾಧ್ಯಾಯಿನಿಯಾದ ಕುಮಾರಿ ಮಾಲತಿಯವರು ತುಂಬು ಹೃದಯದಿಂದ ಧನ್ಯವಾದ ಹೇಳಿದರು.

ಈ ಸಂದರ್ಭದಲ್ಲಿ ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ಆಯುಷ್ ಮಾನ್ ಕಾರ್ಡ್ ನ್ನು ಯೋಜನೆಯ ಸಹಭಾಗಿತ್ವದಲ್ಲಿ ಸಿ ಎಸ್ ಸಿ ಕೇಂದ್ರದ ಸಿಬ್ಬಂದಿಯ ಮೂಲಕ ನೊಂದಾವಣೆ ಮಾಡಿಸಿ ಕೊಂಡರು.

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.