ಕುವೆಟ್ಟು: ಶ್ರೀ ಗುರುನಾರಾಯಣ ಸ್ವಾಮಿ ಸೇವಾ ಸಂಘ ಬಿಲ್ಲವ ಮಹಿಳಾ ವೇದಿಕೆ, ಯುವ ಬಿಲ್ಲವ ವೇದಿಕೆಯಿಂದ ಆಟಿಡೊಂಜಿ ಕೂಟ

ಕುವೆಟ್ಟು : ತುಳುನಾಡಿನ ಜನಜೀವನ ಪದ್ಧತಿಯಲ್ಲಿ ಆಟಿ ತಿಂಗಳು ವಿಶೇಷ ಮಹತ್ವ ಪಡೆದಿದೆ ಆಚರಣೆಗಳು ವಿಜ್ರಂಭಣೆಗಳಾಗದೆ ವಸ್ತು ಸ್ಥಿತಿಯನ್ನು ಮುಂದಿನ ತಲೆಮಾರಿಗೆ ತಲುಪಿಸುವ ಕಾರ್ಯವಾಗಬೇಕು ಎಂದು ಶ್ರೀ ಗುರುನಾರಾಯಣ ಸ್ವಾಮಿ ಸೇವಾ ಸಂಘ ಬೆಳ್ತಂಗಡಿ ಇದರ ಗೌರವಾಧ್ಯಕ್ಷರು ಮಾಜಿ ಶಾಸಕ ವಸಂತ ಬಂಗೇರ ಹೇಳಿದರು.

ಅವರು  ಶ್ರೀ ಗುರುನಾರಾಯಣ ಸ್ವಾಮಿ ಸೇವಾ ಸಂಘ ಬಿಲ್ಲವ ಮಹಿಳಾ ವೇದಿಕೆ ಯುವ ಬಿಲ್ಲವ ವೇದಿಕೆ ಕುವೆಟ್ಟು ಓಡಿಲ್ನಾಳ ಗ್ರಾಮದ ಸಮಿತಿ ಇದರ ವತಿಯಿಂದ ದಿ. ಜಯರಾಮ್ ಬಂಗೇರ ಪ್ರಣಮ್ಯ ಕುವೆಟ್ಟು ಇಲ್ಲಿ ಆ.7 ರಂದು ಜರುಗಿದ  ಆಟಿಡೊಂಜಿ ಕೂಟ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು.

ಕಾರ್ಯಕ್ರಮವನ್ನು ಹಿರಿಯ ಗೋಪಿನಾಥ್ ದಾಸ್ ನ್ಯಾಯದಕಲ ದೀಪ ಬೆಳಗಿಸಿ ಉದ್ಘಾಟಿಸಿದರು. ನಾಟಿ ವೈದ್ಯೆ ಕ್ರಷ್ಣಮ್ಮ ಚಂದ್ರಸಾಲಿಯನ್ ಆಟೋಟ ಸ್ಪರ್ಧೆ ಚೆನ್ನಮಣೆ ಆಟ ಆಡುವ ಮೂಲಕ ಚಾಲನೆ ನೀಡಿದರು. ಕುವೆಟ್ಟು ಬಿಲ್ಲವ ಸಂಘದ ಅಧ್ಯಕ್ಷ ಚಂದ್ರಶೇಖರ್ ಕೋಟ್ಯಾನ್ ಸಬರಬೈಲು ಅಧ್ಯಕ್ಷತೆ ವಹಿಸಿದ್ದರು.  ವೇದಿಕೆಯಲ್ಲಿ ಬೆಳ್ತಂಗಡಿ ತಾಲೂಕು ಬಿಲ್ಲವ ಸಂಘದ ಪ್ರಧಾನ ಕಾರ್ಯದರ್ಶಿ ಜಯವಿಕ್ರಮ. ಮಹೀಳಾ ವೇದಿಕೆಯ ಅಧ್ಯಕ್ಷೆ ಸುಜಿತಾ ವಿ ಬಂಗೇರ. ಯುವ ಬಿಲ್ಲವ ವೇದಿಕೆ ಅಧ್ಯಕ್ಷ ನಿತೀಶ್ ಕೋಟ್ಯಾನ್., ಬೆಳ್ತಂಗಡಿ ಬೆಸ್ಟ್ ಪೌಂಡೇಶನ್ ಅಧ್ಯಕ್ಷ ರಕ್ಷಿತ್ ಶಿವರಾಮ್, ಕುವೆಟ್ಟು ಓಡಿಲ್ನಾಳ ಗ್ರಾಮ ಸಮಿತಿಯ ಬಿಲ್ಲವ ಸಂಘದ ಗೌರವಾಧ್ಯಕ್ಷ ಸತೀಶ್ ಬಂಗೇರ ಕುವೆಟ್ಟು ,  ಮಹಿಳಾ ವೇದಿಕೆಯ ಅಧ್ಯಕ್ಷೆ ಜಯಂತಿ ಜಾಲಿಯರಡ್ಡ, ಯುವ ಬಿಲ್ಲವ ವೇದಿಕೆ ಅಧ್ಯಕ್ಷ ಅನುಪ್ ಬಂಗೇರ ಮದ್ದಡ್ಕ ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ನಾಟಿ ವೈದ್ಯೆ ಕ್ರಷ್ಣಮ್ಮರವರನ್ನು ಸನ್ಮಾನಿಸಲಾಯಿತು ಹಾಗೂ ಪ್ರತಿಭಾನ್ವಿತ ವಿಧ್ಯಾರ್ಥಿಗಳನ್ನು ಗೌರವಿಸಲಾಯಿತು. ಮಾಜಿ ಅಧ್ಯಕ್ಷರು ಉಮೇಶ್ ಕುಮಾರ್ ಮದ್ದಡ್ಕ. ಪ್ರೇಮ ಎಂ ಬಂಗೇರ ಮದ್ದಡ್ಕ, ಧನಲಕ್ಷ್ಮಿ ಚಂದ್ರಶೇಖರ್ ಸಬರಬೈಲು, ಜಗದೀಶ್ ಬಂಗೇರ ಕುವೆಟ್ಟು , ಶಾಂತಾ ಜೆ ಬಂಗೇರ ಕುವೆಟ್ಟು, ಚಂದ್ರಹಾಸ್ ಕೇದೆ ಹಾಗೂ ಸಮಿತಿಯ ಪದಾಧಿಕಾರಿ ಪ್ರಧಾನ ಕಾರ್ಯದರ್ಶಿ ಆನಂದ ಕೋಟ್ಯಾನ್ ಗುರುವಾಯನಕೆರೆ, ಹರೀಶ್ ಕೋಟ್ಯಾನ್. ಸಂತೋಷ್ ಕೋಟ್ಯಾನ್ ಪಾದೆ, ಹರೀಶ್ ಅನಿಲ, ಅಜಿತ್ ಕುಮಾರ್ ಪಾದೆ., ನಳಿನಿ ಜಾಲಿಯರಡ್ಡ., ಲಲಿತಾ ವರಕಬೆ, ಗಾಯತ್ರಿ ಜೆ ಬಂಗೇರ, ಸುಜಾತ ಚಂದ್ರಹಾಸ್ ಕೇದೆ, ಸರ್ವಸದಸ್ಯರು ಉಪಸ್ಥಿತರಿದ್ದರು. ಆನಂದ ಕೋಟ್ಯಾನ್ ಗುರುವಾಯನಕೆರೆ ಕಾರ್ಯಕ್ರಮ ನಿರೂಪಿಸಿದರು. ಶಾಂತಾ ಜೆ ಬಂಗೇರ ಸ್ವಾಗತಿಸಿ,  ಉಮೇಶ್ ಕುಮಾರ್ ಧನ್ಯವಾದವಿತ್ತರು.

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.