ಬೆಳ್ತಂಗಡಿ : ಶ್ರೀ ಧರ್ಮಸ್ಥಳ ಆಂಗ್ಲ ಮಾಧ್ಯಮ ಶಾಲೆ ಬೆಳ್ತಂಗಡಿಯಲ್ಲಿ ವಿದ್ಯಾರ್ಥಿ ವಿಧಾನಪರಿಷತ್ತಿನ ಅಣುಕು ಪ್ರದರ್ಶನ

ಬೆಳ್ತಂಗಡಿ : ಶ್ರೀ ಧರ್ಮಸ್ಥಳ ಆಂಗ್ಲ ಮಾಧ್ಯಮ ಶಾಲೆ ಬೆಳ್ತಂಗಡಿಯಲ್ಲಿ ವಿದ್ಯಾರ್ಥಿ ವಿಧಾನಪರಿಷತ್ತಿನ ಅಣುಕು ಪ್ರದರ್ಶನ ಅಗಸ್ಟ್.6ರಂದು ನಡೆಯಿತು. ವಿದ್ಯಾರ್ಥಿಗಳಾದ ಚಿನ್ಮಯ್ ಜಿ ಕೆ ಹಾಗೂ ಅನನ್ಯ ಕೆಎಸ್ ಇವರು ವಿದ್ಯಾರ್ಥಿಗಳಿಗೆ ವಿಧಾನಪರಿಷತ್ತಿನ ಬಗ್ಗೆ ವಿವರಿಸಿದರು. ವಿದ್ಯಾರ್ಥಿ ವಿಧಾನ ಪರಿಷತ್ತಿನ ಸಭಾಪತಿಯಾದ ವಿದ್ಯಾರ್ಥಿ ಸುದೀಕ್ಷಾ ಸದನದಲ್ಲಿ ಯಾವುದೇ ಗೊಂದಲ , ಮನಸ್ತಾಪವಾಗದಂತೆ ಸದನವನ್ನು ತನ್ನ ಹತೋಟಿಯಲ್ಲಿದ್ದರು. ವಿರೋಧ ಪಕ್ಷ ಹಾಗೂ ಆಡಳಿತ ಪಕ್ಷಗಳು ವಾದ-ವಿವಾದ ಗಳನ್ನು ಮಾಡಿಕೊಂಡರು ವಿದ್ಯಾರ್ಥಿ ನಾಯಕರ ಕೆಲವು ಜವಾಬ್ದಾರಿಗಳನ್ನು ನೆನಪಿಸಿದರು ಹಾಗೂ ಅದನ್ನು ಸರಿಯಾಗಿ ಮಾಡುವಂತೆ ಆಕ್ಷೇಪಿಸಿದರು. ಈ ಕಾರ್ಯಕ್ರಮಕ್ಕೆ ನಮ್ಮ ತಾಲೂಕಿನ ಶಾಸಕರಾದ ಶ್ರೀ ಹರೀಶ್ ಪೂಂಜ ರವರು ಭೇಟಿ ನೀಡಿದರು.

ಅಲ್ಲದೆ ಅವರ ವಾದ ವಿವಾದಗಳನ್ನು ಆಲಿಸಿದರು ವಿಧಾನಪರಿಷತ್ತಿನಲ್ಲಿ ಆಗುವ ಕೆಲವು ವಿಷಯಗಳು ಮಕ್ಕಳ ಮನಸ್ಸಿನಲ್ಲಿ ಯಾವ ರೀತಿ ಪರಿಣಾಮ ಬೀರಿದೆ ಎಂಬುದನ್ನು ಅವರು ಅರಿತುಕೊಂಡರು. ಅಲ್ಲದೆ ಶಾಲಾ ನಾಯಕರಲ್ಲೂ ನನ್ನಂತೆ ಶಾಸಕರಾಗಿ ನಾಯಕತ್ವ ವಹಿಸುವವರು ಮುಂದಕ್ಕೆ ಬರುವ ಸಾಧ್ಯತೆಯೂ ಇದೆ , ಎಂದು ಮಕ್ಕಳಿಗೆ ಶುಭ ಹಾರೈಸಿದರು.

ಈ ಸಂದರ್ಭದಲ್ಲಿ ಶಾಲಾ ಮುಖ್ಯೋಪಾಧ್ಯಾಯನಿಯಾದ ಶ್ರೀಮತಿ ಹೇಮಲತಾ ಎಂ ಆರ್, ಶಾಲಾ ಶಿಕ್ಷಕ ವೃಂದದವರು ಉಪಸ್ಥಿತರಿದ್ದರು . ಶ್ರೀ ಡಿ ಪ್ರಶಾಂತ್ ವ್ಯವಸ್ಥಾಪಕರು ಹಾಗೂ ಸಹಾಯಕ ನಿರ್ದೇಶಕರು, ಶ್ರೀ ಗಣೇಶ್ ಪಂಚಾಯತ್ ಸಹಾಯಕ ಲೆಕ್ಕಾಧಿಕಾರಿ (ಪ್ರಭಾರ) , ಶ್ರೀ ಪುರುಷೋತ್ತಮ್ ಮಡಂತ್ಯಾರು ಪಂಚಾಯತ್ ಅಭಿವೃದ್ಧಿ ಅಧಿಕಾರಿ, ಪಿ ಎಚ್ ಪ್ರಕಾಶ್ ಶೆಟ್ಟಿ ಉಜಿರೆ ಪಂಚಾಯತ್ ಅಭಿವೃದ್ಧಿ ಅಧಿಕಾರಿ, ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು .ಈ ಕಾರ್ಯಕ್ರಮದ ವ್ಯವಸ್ಥೆಯನ್ನು ಶಾಲಾ ಸಹಶಿಕ್ಷಕಿ ಶ್ರೀಮತಿ ಕಸ್ತೂರಿ ಇವರು ಮಕ್ಕಳಿಗೆ ಮಾರ್ಗದರ್ಶನ ನೀಡಿ ಕಾರ್ಯಕ್ರಮವು ಯಶಸ್ವಿಯಾಗುವಂತೆ ಸಹಕರಿಸಿದರು.

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.