ಬೆಳ್ತಂಗಡಿ ರೋಟರಿ ಕ್ಲಬ್ ನಿಂದ ಕುತ್ಲೂರು ಶಾಲೆಗೆ ಸಮವಸ್ತ್ರ ಮತ್ತು ಶೂ ಸಾಕ್ಸ್ ವಿತರಣೆ

ಬೆಳ್ತಂಗಡಿ :ಮಕ್ಕಳ ಕಲಿಕೆಗೆ ಪೂರಕ ವಾತಾವರಣ ಮುಖ್ಯವಾಗುತ್ತದೆ. ಸಮವಸ್ತ್ರ ಮಕ್ಕಳಲ್ಲಿ ಸಮಾನತೆ ಹಾಗೂ ಉತ್ಸಾಹವನ್ನು ಮೂಡಿಸುತ್ತದೆ. ಅವುಗಳನ್ನು ಧರಿಸಿಕೊಂಡು ನಾವು ಯಾರಿಗೂ ಕಡಿಮೆ ಇಲ್ಲ ಎಂಬ ಹುರುಪು ಬೆಳೆಯಲಿ ಎಂದು ಆ ಮೂಲಕ ಆತ್ಮವಿಶ್ವಾಸವನ್ನು ವೃದ್ಧಿಸಿಕೊಂಡು ಕಲಿಕೆಯಲ್ಲಿ ಅಭಿವೃದ್ಧಿ ಹೊಂದಲಿ. ಬದುಕು ಉಜ್ವಲವಾಗಲಿ ಎಂದು ಬೆಳ್ತಂಗಡಿ ರೋಟರಿ ಕ್ಲಬ್ ನ ಅಧ್ಯಕ್ಷೆ ರೊಟೇರಿಯನ್ ಮನೋರಮಾ ಭಟ್ ಹೇಳಿದರು. ಅವರು ಸರಕಾರಿ ಉನ್ನತೀಕರಿಸಿದ ಪ್ರಾಥಮಿಕ ಶಾಲೆ ಕುತ್ಲೂರು ಇಲ್ಲಿಯ ಮಕ್ಕಳಿಗೆ ರೋಟರಿ ಸಂಸ್ಥೆಯಿಂದ ಉಚಿತ ಸಮವಸ್ತ್ರ ಮತ್ತು ಶೂ ಸಾಕ್ಸ್ ಗಳನ್ನು ವಿತರಿಸಿ  ಮಾತನಾಡಿದರು.

ಇಂದು ಪ್ರತಿಯೊಂದು ಕ್ಷೇತ್ರದಲ್ಲಿಯೂ ಕಠಿಣ ಸ್ಪರ್ಧೆ ಇದೆ. ಶಿಕ್ಷಣ ಕ್ಷೇತ್ರದಲ್ಲಂತೂ ಖಾಸಗಿ ಶಾಲೆಗಳು ಆಂಗ್ಲ ಮಾಧ್ಯಮದ ಮೂಲಕ ಸರಕಾರಿ ಶಾಲೆಗಳಿಗೆ ಪೈಪೋಟಿ ನೀಡುತ್ತಿದೆ. ಆದರೆ ಈ ಎಲ್ಲಾ ಸವಾಲುಗಳನ್ನು ಕುತ್ಲೂರು ಶಾಲೆ ತನ್ನ ಸೀಮಿತ ಸಂಪನ್ಮೂಲಗಳನ್ನು ಉಪಯೋಗಿಸಿಕೊಂಡು ಪ್ರತೀ ವರ್ಷ ಧನಾತ್ಮಕ ಬೆಳವಣಿಗೆಯನ್ನು ಕಾಣುತ್ತಿದೆ. ಅದಕ್ಕೆ ಕಾರಣ ಶಾಲಾ ಅಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ. ಅದರಲ್ಲೂ ಅಭಿವೃದ್ಧಿ ಸಮಿತಿಯ ಅಧ್ಯಕ್ಷರ ರಾಮಚಂದ್ರ ಭಟ್ ರವರ ನಿರಂತರ ದುಡಿಮೆ, ಮಾರ್ಗದರ್ಶನ ಶ್ಲಾಘ ನಾರ್ಹ ಮತ್ತು ಇತರರಿಗೆ ಮಾದರಿ. ಇದೇ ರೀತಿ ಈ ಶಾಲೆಯ ಅಭಿವೃದ್ಧಿ ಪಥ ಮುಂದುವರೆಯಲಿ. ಇಲಾಖೆಯ ಸಂಪೂರ್ಣ ಸಹಕಾರ ನಾವು ನೀಡುತ್ತೇವೆ ಬೆಳ್ತಂಗಡಿ ಕ್ಷೇತ್ರ ಶಿಕ್ಷಣಾಧಿಕಾರಿ ವಿರೂಪಾಕ್ಷಪ್ಪ ಹೇಳಿದರು.

ಎಸ್ ಡಿ ಎಂ ಸಿ ಅಧ್ಯಕ್ಷ ರಾಮಚಂದ್ರ ಭಟ್ ಅಧ್ಯಕ್ಷತೆ ವಹಿಸಿದ್ದರು.

ವೇದಿಕೆಯಲ್ಲಿ ನಾರಾವಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಆಶಲತಾ, ಬೆಳ್ತಂಗಡಿ ರೋಟರಿ ಕ್ಲಬ್ ನ ಕಾರ್ಯದರ್ಶಿ ರೊಟೇರಿಯನ್ ರಕ್ಷಾ ರಾಘ್ನೇಶ್, ಪಂಚಾಯತ್ ಸದಸ್ಯರಾದ ಸಂತೋಷ್, ಶ್ರೀಮತಿ ಮೀನಾ, ಶ್ರೀಮತಿ ಪ್ರೇಮ, ಅಂಗನವಾಡಿ ಶಿಕ್ಷಕಿಯಾದ ಶ್ರೀಮತಿ ಅಕ್ಷತಾ ಉಪಸ್ಥಿತರಿದ್ದರು. ಮುಖ್ಯೋಪಾಧ್ಯಾಯನಿ ಶ್ರೀಮತಿ ಸುಮನಾಜಿ ಸ್ವಾಗತಿಸಿದರು. , ಟಿ.ಜಿ.ಟಿ ಶಿಕ್ಷಕಿ ಶ್ರೀಮತಿ ರೂಪ ಅವರು ವಂದಿಸಿದರು. ಸಹಶಿಕ್ಷಕ ಪ್ರಶಾಂತ್ ಕಾರ್ಯಕ್ರಮ ನಿರೂಪಿಸಿದರು.
ಶಾಲೆಯ ಸಮಸ್ತ ಪೋಷಕರು, ಸಹ ಶಿಕ್ಷಕರು, ವಿದ್ಯಾರ್ಥಿಗಳು ಹಾಜರಿದ್ದರು.

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.