ಬಡಕೋಡಿಯಲ್ಲಿ ವನ ಸಿರಿ ಯೋಜನೆಯಂತೆ ವನಮಹೋತ್ಸವ

ಹೊಸಂಗಡಿ :ಗ್ರಾಮ ಪಂಚಾಯತ್ ಹೊಸಂಗಡಿ, ರೋಟರಿ ಕ್ಲಬ್ ಸಿದ್ಧಕಟ್ಟೆ ಫಲ್ಗುಣಿ ಇನ್ನರ್ ವೀಲ್ ಕ್ಲಬ್ ಮೂಡುಬಿದಿರೆ ಹಾಗೂ ಯುನಿವರ್ಸಲ್ ನಾಲೆಜ್ ಸಂಸ್ಥೆ ಮಂಗಳೂರು ಇವರ ಜಂಟಿ ಆಶ್ರಯದಲ್ಲಿ ಹೊಸಂಗಡಿ ವ್ಯಾಪ್ತಿಯ ಬಡಕೋಡಿ ಗ್ರಾಮದ ದಂಡ್ಯೊಟ್ಟು ಆಟದ ಮೈದಾನದಲ್ಲಿ ರೋಟರಿಯ ಜಿಲ್ಲಾ ಕಾರ್ಯಕ್ರಮ ವನಸಿರಿ ಯೋಜನೆಯಂತೆ ವಿವಿಧ ಹಣ್ಣುಹಂಪಲು ಗಿಡಗಳನ್ನು ನೆಟ್ಟು ವನಮಹೋತ್ಸವವನ್ನು ಆ.7 ರಂದು ಆಚರಿಸಲಾಯಿತು.

ಕಾರ್ಯಕ್ರಮದಲ್ಲಿ ಹೊಸಂಗಡಿ ಪಂಚಾಯತ್ ಅಧ್ಯಕ್ಷರು ಕರುಣಾಕರ ಪೂಜಾರಿ,ಪಿಡಿಒ ರೋಟರಿ ಸಿದ್ಧಕಟ್ಟೆ ಫಲ್ಗುಣಿ ಇದರ ಅಧ್ಯಕ್ಷ ರೊ. ಗಣೇಶ್ ಶೆಟ್ಟಿ, ಮೂಡಬಿದ್ರೆ ಇನ್ನರ್ ವೀಲ್ ಅಧ್ಯಕ್ಷರಾದ ರಮ್ಯ ವಿಕಾಸ್ ಜೈನ್, ರಶಿಕಾ ಕಂಬಳಿ, ಯೂನಿವರ್ಸಲ್ ಟ್ರಸ್ಟ್ ನಿರ್ದೇಶಕ ರೋಹನ್ ಸಿರಿ, ಶಮ್ಮಿ ಸಿರಿ, ವಿದ್ಯಾಶಂಕರ್, ನರೇಂದ್ರ, ರೋಟರಿ ಸದಸ್ಯರಾದ ಹರೀಶ್ ಕಲ್ಲಬೆಟ್ಟು, ಪದ್ಮನಾಭ, ಶಿವರಾಜ್ ಶೆಟ್ಟಿ, ಪಂಚಾಯತ್ ಸದಸ್ಯರಾದ ಲೋಕೇಶ್ ಹಾಗೂ ಸ್ಥಳೀಯ ಭಜನಾ ಮಂಡಳಿ ಸದಸ್ಯರು ಮತ್ತು ಪಂಚಾಯತ್ ಸಿಬ್ಬಂದಿಗಳು ಉಪಸ್ಥಿತರಿದ್ದರು. 150 ವಿವಿಧ ಜಾತಿಯ ಹಣ್ಣು ಹಂಪಲು ಗಿಡ ಗಳನ್ನೂ ನೆಡಲಾಯಿತು.

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.