ಬೆಳ್ತಂಗಡಿ ಧರ್ಮ ಪ್ರಾಂತಿಯ ಯುವಜನ ವರ್ಷ ಉದ್ಘಾಟನೆ

ಗಂಡಿಬಾಗಿಲು : ಬೆಳ್ತಂಗಡಿ ಧರ್ಮಪ್ರಾಂತ್ಯ ತನ್ನ ಸ್ಥಾಪನೆಯ ರಜತ ಮಹೋತ್ಸವಕ್ಕೆ ಸಿದ್ಧತೆಯಾಗಿ 2022-23 ನೇ ವರ್ಷವನ್ನು ಯುವ ಜನ ವರ್ಷವಾಗಿ ಆಚರಿಸಲಾಗುತ್ತಿದೆ. ಪ್ರಸ್ತುತ ಕಾರ್ಯಕ್ರಮದ ಉದ್ಘಾಟನೆಯನ್ನು ಗಂಡಿಬಾಗಿಲು ಸಂತ ತೋಮಸರ ದೇವಾಲಯದಲ್ಲಿ  ಆ.7 ರಂದು ವಿದ್ಯಕ್ತವಾಗಿ ಉದ್ಘಾಟಿಸಲಾಯಿತು.

ಈ ಸಂದರ್ಭದಲ್ಲಿ ಪ್ರಾಂತಿಯ ಯುವಜನ ನಿರ್ದೇಶಕ ವಂ. ಫಾ. ಚೀರನ್ ಜೋಸೆಫ್ ಅವರು ಯುವ ಜನತೆ ರಾಷ್ಟ್ರ ದ ಮತ್ತು ಧರ್ಮ ದ ಸ್ವತ್ವ ವನ್ನು ತಿಳಿದು ಯೇಸು ಕ್ರಿಸ್ತರ ಬೋಧನೆಯಂತೆ ವ್ಯಕ್ತಿಯ ಮತ್ತು ಸಮಾಜದ ಬೆಳಕಾಗಿ ಪ್ರಕಾಶಸುವರಾಗ ಬೇಕೆಂದು ಕರೆನೀಡಿದರು.

ಕೆ ಎಸ್ ಎಂ ಸಿ ಎ ನಿರ್ದೇಶಕ ಫಾ. ಷಾಜಿ ಮಾತ್ಯು, ಕೆ ಎಸ್ ಎಂ ಸಿ ಎ ಕೇಂದ್ರ ಸಮಿತಿ ಸದಸ್ಯರು ಚರ್ಚಿನ ಟ್ರಸ್ಟಿ ಸೇಬಾಸ್ಟಿನ್ ಎಂ ಜೆ, ಶಿಜೋ, ಯುವಜನ ವಿಭಾಗ ಎಸ್ ಎಂ ವೈ ಎಂ ಅಧ್ಯಕ್ಷ  ಮಿಥುನ್, ಟಿನ್ಸಿ, ಅಜಿತ್, ಅಭಿಲಾಶ್ ಆಧಿಲ್, ಮರೀನಾ ಬ್ರದರ್ ಡೆನಿಸ್ ಮೊದಲಾದವರು ಉಪಸ್ಥಿತರಿದ್ದರು

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.