ನ್ಯಾಯತರ್ಪು: ಇತ್ತೀಚೆಗೆ ನಿಧನರಾದ ವೆಂಕಪ್ಪ ಗೌಡ ಬದ್ಯಾರು, ಕುಶಾಲಪ್ಪ ಗೌಡ ಬದ್ಯಾರು ಹಾಗೂ ಸುಶೀಲ ಶುಂಠಿಪಲ್ಕೆ ಇವರ ಮನೆಯವರಿಗೆ ರಕ್ತೇಶ್ವರಿಪದವು ಶ್ರೀ ಮಂಜುನಾಥೇಶ್ವರ ಭಜನಾ ಮಂಡಳಿಯ ವತಿಯಿಂದ ತಲಾ ಎರಡು ಸಾವಿರ ರೂಪಾಯಿಗಳಂತೆ ಒಟ್ಟು ಆರು ಸಾವಿರ ರೂ.ಗಳ ಸಾಂತ್ವನ ಧನ ವಿತರಿಸಲಾಯಿತು.
ಭಜನಾ ಮಂಡಳಿಯ ಅಧ್ಯಕ್ಷ ರಂಜನ್ ಮುದ್ದುಂಜ ಹಾಗೂ ಭಜನಾ ಮಂಡಳಿಯ ಪದಾಧಿಕಾರಿಗಳು ಮತ್ತು ಸದಸ್ಯರು ಮೃತರ ಮನೆಗಳಿಗೆ ತೆರಳಿ ಸಾಂತ್ವನ ಧನವನ್ನು ನೀಡಿದರು.