ರಾಜ್ಯಸಭಾ ಸದಸ್ಯರಾಗಿ ಪ್ರಮಾಣವಚನ ಸ್ವೀಕರಿಸಿದ ಹೆಗ್ಗಡೆಯವರಿಗೆ ಯಕ್ಷ ಭಾರತಿ ಕನ್ಯಾಡಿ ವತಿಯಿಂದ ಅಭಿನಂದನೆ

ಧರ್ಮಸ್ಥಳ:  ರಾಜ್ಯಸಭಾ ಸದಸ್ಯರಾಗಿ ಪ್ರಮಾಣವಚನ ಸ್ವೀಕರಿಸಿದ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ ಇವರನ್ನು ಯಕ್ಷ ಭಾರತಿ ( ರಿ)ಕನ್ಯಾಡಿ ವತಿಯಿಂದ ಅಭಿನಂದಿಸಲಾಯಿತು.

ಯಕ್ಷ ಭಾರತಿ ಸಂಸ್ಥೆಯ ಎಂಟನೇ ವಾರ್ಷಿಕೋತ್ಸವದ ಆಮಂತ್ರಣ ಪತ್ರಿಕೆಯನ್ನು ಗೌರವ ಪೂರ್ವಕವಾಗಿ ಹೆಗ್ಗಡವರಿಗೆ ನೀಡಲಾಯಿತು.

ಯಕ್ಷ ಭಾರತಿ ಅಧ್ಯಕ್ಷರಾದ ರಾಘವೇಂದ್ರ ಬೈಪಡಿತ್ತಾಯ, ಕಾರ್ಯದರ್ಶಿ ದಿವಾಕರ ಆಚಾರ್ಯ ಗೇರುಕಟ್ಟೆ, ವಿಶ್ವಸ್ಥರಾದ ವಿದ್ಯಾಕುಮಾರ್ ಕಾಂಚೊಡು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಯಕ್ಷ ಭಾರತಿ ವಾರ್ಷಿಕೋತ್ಸವದ ಅಂಗವಾಗಿ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಉಜಿರೆ ಸಹಯೋಗದಲ್ಲಿ ನಡೆಸಲಾಗುವ ಆರೋಗ್ಯ ತಪಾಸಣಾ ಶಿಬಿರ , ಮಂಗಳೂರಿನ ರೆಡ್ ಕ್ರಾಸ್ ಸಂಸ್ಥೆ ಸಹಕಾರದಲ್ಲಿ ರಕ್ತದಾನ ಶಿಬಿರ ,ಯಕ್ಷ ಭಾರತಿ ಪ್ರಶಸ್ತಿ ಪ್ರದಾನ, ವಿದ್ಯಾನಿಧಿ ವಿತರಣೆ, ಸೇವಾ ಗೌರವ ಸನ್ಮಾನ, ಯಕ್ಷಗಾನ ತಾಳಮದ್ದಳೆ, ಯಕ್ಷಗಾನ ಪ್ರದರ್ಶನ ಬಗ್ಗೆ ತಿಳಿದು ಹೆಗ್ಗಡಯವರು ಸಂತಸ ವ್ಯಕ್ತಪಡಿಸಿದರು .

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.