ಬೆಳ್ತಂಗಡಿ ನೆರಿಯ ಶೌರ್ಯ ವಿಪತ್ತು ಘಟಕದ ಸ್ವಯಂಸೇವಕರಿಂದ ವಾಸ್ತಲ್ಯ ಹೊಸ ಮನೆ ನಿರ್ಮಾಣದ ಮೊದಲ ಹಂತದ ಫೌಂಡೇಶನ್ ಸ್ವಚ್ಛತೆ ಹಾಗೂ ಮನೆಯ ಸುತ್ತಲೂ ಸ್ವಚ್ಛತೆ ಕಾರ್ಯಕ್ರಮ ನಡೆಯಿತು.
ನೆರಿಯ ಗ್ರಾಮದ ನೆಕ್ಕರೆ ಶಿವಣ್ಣ ಇವರಿಗೆ ಹೊಸ ಮನೆ ನಿರ್ಮಾಣ ಕಾರ್ಯ ನಡೆಯುತ್ತಿರುವ ಜಾಗದಲ್ಲಿ ಪೊದೆಗಳು ತುಂಬಿದ್ದು ಇವುಗಳ ಸ್ವಚ್ಛತಾ ಕಾರ್ಯವನ್ನು ಮಾಡಲಾಯಿತು.
ವಲಯದ ಮೇಲ್ವಿಚಾರಕರಾದ ರಾಜೇಶ್ ಇವರು ಹಾಗೂ ಜ್ಞಾನ ವಿಕಾಸ ಸಮನ್ವಯಾಧಿಕಾರಿ ಶಶಿಕಲ, ಘಟಕ ಸ್ವಯಂ ಸೇವಕರುಗಳಾದ ಸತೀಶ್, ಕೃಷ್ಣಪ್ಪ ,ಸುಮಿತ್ರ, ಶಶಿಕಲಾ ಪರಮೇಶ್ವರ್ ,ಶೀನ ,ಸುಮತಿ ಸಜಿತ, ಧರ್ಮಪ್ಪ ,ಘಟಕ ಪ್ರತಿನಿಧಿಯಾದ ನವೀನ್ ಹಾಗೂ ಸಂಯೋಜಕಿಯಾದ ಸುನಂದ ಉಪಸ್ಧಿತರಿದ್ದರು.