ಬೆಳ್ತಂಗಡಿ ತಾಲೂಕಿನ ಸುದ್ದಿ ಪ್ರತಿನಿಧಿಗಳ ಸಭೆ

ಬೆಳ್ತಂಗಡಿ: ಸುದ್ದಿ ಬಿಡುಗಡೆ ಪತ್ರಿಕೆ, ಸುದ್ದಿ ಆನ್‌ಲೈನ್ ನ್ಯೂಸ್, ಸುದ್ದಿ ಚಾನೆಲ್‌ನ ತಾಲೂಕಿನ ವಿವಿಧ ಗ್ರಾಮಗಳ ಪ್ರತಿನಿಧಿಗಳ ಸಭೆ ಆ.4 ರಂದು ಬೆಳ್ತಂಗಡಿ ಶ್ರೀ ಗುರುನಾರಾಯಣ ಸಭಾ ಭವನದಲ್ಲಿ ಜರುಗಿತು.

ಪ್ರತಿನಿಧಿಗಳನ್ನು ಉದ್ದೇಶಿಸಿ ಮಾತನಾಡಿದ ಸುದ್ದಿ ಸಮೂಹ ಸಂಸ್ಥೆಗಳ ವ್ಯವಸ್ಥಾಪಕ ನಿರ್ದೇಶಕ, ಪತ್ರಿಕಾ ಸಂಪಾದಕರಾದ  ಡಾ. ಯು.ಪಿ ಶಿವಾನಂದ ಅವರು  ಸ್ವಾತಂತ್ರ್ಯೋತ್ಸವದ ಅಮೃತಮಹೋತ್ಸವದ ಆಚರಣೆಯ ವಿವರಗಳನ್ನು ಪ್ರತೀ ಪಂಚಾಯತ್ ಮಟ್ಟದಲ್ಲಿ ಆಯಾ ಪ್ರತಿನಿಧಿಗಳು ಕ್ಲಪ್ತ ಸಮಯದಲ್ಲಿ ವರದಿ ಮಾಡಿ ಅಂದು ಪ್ರಸಾರಗೊಳ್ಳುವ ಕಾರ್ಯಕ್ರಮದ ನೇರಪ್ರಸಾರಕ್ಕೆ ಸಹಕಾರ ನೀಡಬೇಕು ಹಾಗೂ ಸುದ್ದಿ ಮಾಹಿತಿ ಟ್ರಸ್ಟ್ ವತಿಯಿಂದ ಹಮ್ಮಿಕೊಳ್ಳಲಾಗುವ  ಕೃಷಿ ಮಾಹಿತಿಯ ವಿವರವನ್ನು ಸಂಗ್ರಹ ಮಾಡಿಕೊಡುವ ಬಗ್ಗೆ ವಿವರಿಸಿದರು.

ಸುದ್ದಿ ಕಚೇರಿ ವ್ಯವಸ್ಥಾಪಕ ಮಂಜುನಾಥ ರೈ,   ಪುತ್ತೂರು ಸುದ್ದಿ ಬಿಡುಗಡೆ ಪತ್ರಿಕೆಯ ವರದಿಗಾರ ಹಾಗೂ ಸುದ್ದಿ ಪ್ರತಿನಿಧಿಗಳ ಮೇಲ್ವಿಚಾರಕ ರಾಜೇಶ್ ,  ಶಿವಪ್ರಸಾದ್ ಪುತ್ತೂರು,  ಚೇತನ್ ಶರ್ಮಾ,  ಬೆಳ್ತಂಗಡಿ ಸುದ್ದಿ ಪತ್ರಿಕೆಯ ಮುಖ್ಯ ವರದಿಗಾರ ಬಿ.ಎಸ್.ಕುಲಾಲ್,  ಸುದ್ದಿ ನ್ಯೂಸ್ ಚಾನೆಲ್‌ನ ಮುಖ್ಯಸ್ಥ ದಾಮೋದರ ದೊಂಡೋಲೆ ಚಾನೆಲ್‌ಗೆ ನ್ಯೂಸ್ ಸಂಗ್ರಹದ ಬಗ್ಗೆ, ಸುದ್ದಿ ಆನ್‌ಲೈನ್ ನ್ಯೂಸ್‌ನ ವರದಿಗಾರ್ತಿ ಹಿತಶ್ರೀ ಆನ್‌ಲೈನ್ ನ್ಯೂಸ್  ಬಗ್ಗೆ ,  ಶ್ವೇತಾ ಕುಲಾಲ್ ಮಾರ್ಕೆಟಿಂಗ್ ಬಗ್ಗೆ ಮಾಹಿತಿ ನೀಡಿದರು.

ಸಭೆಯಲ್ಲಿ ಸುದ್ದಿ ಪ್ರತಿನಿಧಿಗಳಾದ ಶ್ರೀನಿವಾಸ ತಂತ್ರಿ ಉಜಿರೆ, ರತ್ನಾಕರ ನಾವೂರು, ಗಿರೀಶ್ ಕೆ.ಎಸ್ ವೇಣೂರು, ಸೀತಾರಾಮ ಆಳ್ವ, ರಂಜನ್ ನೆರಿಯ, ಸದಾನಂದ ಸಾಲಿಯಾನ್ ಬಳಂಜ, ನಿಶಾನ್ ಧರ್ಮಸ್ಥಳ ನಾರ್ಯ,  ,  ಸಿಬ್ಬಂದಿಗಳಾದ ಜಾರಪ್ಪ ಪೂಜಾರಿ ,  ತಿಮ್ಮಪ್ಪ ಗೌಡ, ತುಕರಾಮ್, ಹೆರಾಲ್ಡ್ ಪಿಂಟೋ, ಸಂತೋಷ್ ಪಿ ಕೋಟ್ಯಾನ್ ಬಳಂಜ, ಈಶ್ವರ್ ಪಿ.ಹೆಚ್,   ಆನಂದ ಗೌಡ, ಸುಧಾ, ಪ್ರತಿಭಾ, ಧನ್ಯಾ, ಅನುಷಾ, ಮೋಹಿನಿ, ಸೌಮ್ಯ, ಆದಿತ್ಯ ದೊಂಡೋಲೆ, ದಿವಾಕರ್, ದುರ್ಗಾಪ್ರಸಾದ್, ಅಭಿಷೇಕ್,  ಲಕ್ಷ್ಮಣ ಗೌಡ ಉಪಸ್ಥಿತರಿದ್ದರು.

ಸುದ್ದಿ ಕಚೇರಿ ಪ್ರತಿನಿಧಿಗಳ ಮೇಲ್ವಿಚಾರಕ ಕೆ.ಎನ್ ಗೌಡ  ಸ್ವಾಗತಿಸಿದರು. ವರದಿಗಾರರಾದ ಜಾರಪ್ಪ ಪೂಜಾರಿ ಧನ್ಯವಾದ ಗೈದರು.

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.