ನಾರಾವಿಯಲ್ಲಿ ಭಾರೀ ಸ್ಪೋಟ ಸದ್ದು!! ಸೇತುವೆ ಮೇಲ್ಭಾಗದಲ್ಲಿ ಏಕಾಏಕಿ ನೀರು: ರಸ್ತೆಯಲ್ಲಿ ಭಾರೀ ಟ್ರಾಫಿಕ್ ಜಾಮ್

ನಾರಾವಿ: ನಾರಾವಿ ಭಾಗದಲ್ಲಿ ಆ.3ರಂದು ಸಂಜೆ 4 ಗಂಟೆ ವೇಳೆಗೆ ಭಾರೀ ಸ್ಪೋಟಕ ಸದ್ದು ಕೇಳಿ ಬಂದಿದ್ದು ಜೊತೆಗೆ ಸತತ ಮಳೆ ಸುರಿದಿದೆ. ಇದರ ಜೊತೆ ಭಾರೀ ಕೆಸರು ಮಿಶ್ರಿತ ನೀರು ಹರಿಯುತ್ತಿತ್ತು ಎನ್ನಲಾಗಿದೆ.

ಕುದುರೆಮುಖ ಅಭಯಾರಣ್ಯ ವ್ಯಾಪ್ತಿಯ ಸುವರ್ಣ ನದಿಯಲ್ಲಿ ಏಕಾಏಕಿ ಭಾರೀ ಕೆಸರು ನೀರಿನಿಂದ ನೀರಿನ ಹರಿವು ಉಂಟಾದ ಸಂದರ್ಭದಲ್ಲಿ ಭೂ ಕುಸಿತವಾಗಿರುವ ಸಂಶಯ ವ್ಯಕ್ತವಾಗಿದೆ. ಈ ಭಾಗದಲ್ಲಿ ಮಳೆ ನಿರಂತರ ಸುರಿಯುತ್ತಿದ್ದು ಹೆಚ್ಚಿನ ಮಾಹಿತಿ ತಿಳಿದು ಬಂದಿಲ್ಲ.

ನೂರಾಲ್ಬೆಟ್ಟು, ನಾರಾವಿ, ಕುತ್ಲೂರು, ಈದು ಮೂರು ಗ್ರಾಮಗಳು ಶೇ.90%ರಷ್ಟು ಅರಣ್ಯ ಪ್ರದೇಶಗಳಿಂದ ಆವೃತವಾದ ಪ್ರದೇಶಗಳಾಗಿವೆ. ನಾರಾವಿ ಸೂರ್ಯ ನಾರಾಯಣ ದೇವಸ್ಥಾನದ ಬಳಿ ಹರಿಯುತ್ತಿರುವ ಸುವರ್ಣ ನದಿಯಲ್ಲಿ ಏಕಾಏಕಿ ಪ್ರವಾಹ ಉಂಟಾಗಿದ್ದು ದೇವಾಲಯ ರಸ್ತೆ ಸಂಪೂರ್ಣ ಜಲಾವೃತಗೊಂಡಿದೆ . ಕಾರ್ಕಾಳ -ಬೆಳ್ತಂಗಡಿ ರಾಜ್ಯ ಹೆದ್ದಾರಿಯ ನಾರಾವಿ ಅರಸಿನಕಟ್ಟೆ ಎಂಬಲ್ಲಿ ಸೇತುವೆ ಮೇಲ್ಬಾಗದಲ್ಲಿ ನೀರು ಹರಿದಿದ್ದು ದ್ವಿಚಕ್ರ ವಾಹನ ಸವಾರರಿಗೆ ಸಂಚರಿಸಲು ತೊಂದರೆ ಉಂಟಾಗಿತ್ತು.

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.