ಬೆಳ್ತಂಗಡಿ: 2022 ನೇ ಸಾಲಿನ ಸಿ ಇ ಟಿ ಫಲಿತಾಂಶ ಜು.30 ರಂದು ಪ್ರಕಟವಾಗಿದ್ದು ಬೆಳ್ತಂಗಡಿ ತಾಲೂಕಿನ ಅರಸಿನಮಕ್ಕಿ ಗ್ರಾಮದ ಪ್ರತೀಕ್ ರಾವ್ ಎಂ ಪಿ ರಾಜ್ಯಕ್ಕೆ 71 ನೇ ಸ್ಥಾನವನ್ನು ಗಳಿಸಿದ್ದಾರೆ.
ಇವರು ಅರಸಿನಮಕ್ಕಿ ಗ್ರಾಮದ ಪೆರಡೇಲು ಮನೆಯ ಶೀಧರ್ ಎಂ. ಪಿ ಮತ್ತು ರೂಪಾ ದಂಪತಿಗಳ ಎರಡನೇ ಪುತ್ರ.
ಪ್ರತೀಕ್ ರಾವ್ ಎಂ ಪಿ ಇವರು ದ್ವೀತಿಯ ಪಿಯುಸಿ ಪರೀಕ್ಷೆ ಯಲ್ಲಿ 99.9% ( PCMC) ಯಲ್ಲಿ ಗಳಿಸಿದ್ದಾರೆ. ಇವರು ಬೆಂಗಳೂರಿನ ರಾಜಾಜಿನಗರ ಬೇಸ್ ಪಿಯು ಕಾಲೇಜಿನ ವಿದ್ಯಾರ್ಥಿಯಾಗಿದ್ದಾರೆ.