ಕೊಯ್ಯೂರು ಅರ್ತಲ್ಕೆಯಲ್ಲಿ ಹಟ್ಟಿಗೆ ಆಕಸ್ಮಿಕ ಬೆಂಕಿ: 4 ಕ್ವಿಂಟಾಲ್ ಅಡಿಕೆ, 3 ಕ್ವಿಂಟಾಲ್ ರಬ್ಬರ್ ಭಸ್ಮ

ಕೊಯ್ಯೂರು: ಕೊಯ್ಯೂರು ಗ್ರಾಮದ ಅರ್ತಲ್ಕೆ ನಿವಾಸಿ ಸೇಸಪ್ಪ ಮುಗೇರ ಎಂಬವರ ಹಟ್ಟಿಗೆ ಆಕಸ್ಮಿಕವಾಗಿ ಬೆಂಕಿ ಬಿದ್ದ ಘಟನೆ ಆ.2 ರಂದು ನಡೆದಿದೆ.

ಪರಿಣಾಮ ಮೇಲ್ಛಾವಣಿ ಸುಟ್ಟು ಹೋಗಿ,  ದನ ಕರುಗಳಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಅಪಾರ ನಷ್ಟ ಉಂಟಾಗಿದೆ.

ಮನೆಯವರು ರಾತ್ರಿ ವೇಳೆ ಮಲಗಿದ್ದ ಸಂದರ್ಭದಲ್ಲಿ ಹಟ್ಟಿಗೆ ಆಕಸ್ಮಿಕವಾಗಿ ಬೆಂಕಿ ಬಿದ್ದಿದೆ. ಇದನ್ನು ಗಮನಿಸಿದ ಪಕ್ಕದ ಮನೆಯವರು ಮನೆ ಯಜಮಾನನಿಗೆ ತಿಳಿಸಿದ್ದು ಮನೆ ಯಜಮಾನ ಸೇಸಪ್ಪ ಮುಗೇರ  ಬಂದು ನೊಡಿದಾಗ ಹಟ್ಟಿಯು ಸಂಪೂರ್ಣವಾಗಿ ಸುಟ್ಟಿದೆ. ದನ ಕರುಗಳನ್ನು ತಕ್ಷಣ ಸುರಕ್ಷಿತ ಸ್ಥಳಕ್ಕೆ ರವಾನಿಸಿದ್ದಾರೆ.

ಬ್ಯಾಂಕ್ ಸಾಲ ಕಟ್ಟಲು ಕೂಡಿಟ್ಟ4 ಕ್ಷಿಂಟಲ್ ಅಡಿಕೆ , 3 ಕ್ವಿಂಟಲ್ ರಬ್ಬರ್ ಸಂಪೂರ್ಣ ಸುಟ್ಟು ಕರಕಲಾಗಿ ಅಪಾರ ಹಾನಿಯಾಗಿದೆ ಇನ್ನೂ ಬ್ಯಾಂಕ್ ಸಾಲ ಕಟ್ಟುವುದು ಹೇಗೆ ಎಂದು ತನ್ನ ಅಳಲನ್ನು ತೋಡಿಕೊಂಡಿದ್ದಾರೆ.

ಘಟನಾ ಸ್ಥಳಕ್ಕೆ ಗ್ರಾ.ಪಂ  ಅಧ್ಯಕ್ಷರು, ಸದಸ್ಯರು, ಕಂದಾಯ ಇಲಾಖೆಯ ಅಧಿಕಾರಿಗಳು ಪಶುವೈಧ್ಯರು ಹಾಗೂ ವಿವಿಧ ಇಲಾಖೆಗಳು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಪೊಲೀಸರು ಇನ್ನಷ್ಟೇ ಪರಿಶೀಲಿಸಬೇಕಾಗಿದೆ ಈ ಘಟನೆಗೆ ಹೆಚ್ಚಿನ ಮಾಹಿತಿ ಲಭ್ಯವಾಗಬೇಕಾಗಿದೆ.

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.