ಹೋಲಿ ರಿಡೀಮರ್ ಶಿಕ್ಷಣ ಸಂಸ್ಥೆಯ ಸಂಚಾಲಕರಾದ ಅತೀ ವಂ.ಫಾ. ಜೋಸೆಫ್ ಅಲ್ಫೋನ್ಸ್ ಕಾರ್ಡೋಜರವರ 69ನೇ ವರ್ಷದ ಹುಟ್ಟು ಹಬ್ಬವನ್ನು ಸಂಭ್ರಮದಿಂದ ಆ. 1 ರಂದು ಶಾಲಾ ಸಭಾಂಗಣದಲ್ಲಿ ಆಚರಿಸಲಾಯಿತು.
ಚರ್ಚ್ ಹಿ, ಪ್ರಾ, ಶಾಲೆಯ ಮುಖ್ಯ ಶಿಕ್ಷಕಿ ಶ್ರೀಮತಿ ರೆನ್ನಿ ವಾಸ್ ರವರು ಶಾಲಾ ಸಂಚಾಲಕರ ಕಿರು ಪರಿಚಯವನ್ನು ಮಾಡಿ ಹುಟ್ಟು ಹಬ್ಬಕ್ಕೆ ಶುಭ ಹಾರೈಸಿದರು. ಶಿಕ್ಷಕ ವೃಂದದವರು ಶುಭಾಶಯ ಗೀತೆಯನ್ನು ಹಾಡಿದರು. ಉಭಯ ಶಾಲೆಗಳ ಶಿಕ್ಷಕ ಮತ್ತು ವಿದ್ಯಾರ್ಥಿಗಳು ಉಡುಗೊರೆಯನ್ನು ನೀಡಿದರು. ಇಳಿ ವಯಸ್ಸಿನಲ್ಲಿಯೂ ಅತೀ ಚಟುವಟಿಕೆಯಿಂದ ತಮ್ಮ ಜವಾಬ್ದಾರಿಗಳನ್ನು ನಿರ್ವಹಿಸುವ ಸಂಚಾಲಕರು ನಮ್ಮೆಲ್ಲರಿಗೂ ಸ್ಫೂರ್ತಿ ಎಂದು ಶಾಲಾ ಮುಖ್ಯೋಪಾಧ್ಯಾಯರಾದ ವಂ. ಫಾ ಕ್ಲಿಫರ್ಡ್ ಪಿಂಟೋರವರು ನುಡಿದು ಶುಭ ಹಾರೈಸಿದರು.
ದೇವರು ಸರ್ವಾಂತರ್ಯಾಮಿ. ಜೀವನದ ಪ್ರತಿಯೊಂದು ಹಂತದಲ್ಲೂ ದೇವರ ಅನುಗ್ರಹವು ನಮ್ಮ ಮೇಲಿರುತ್ತದೆ. ತಮ್ಮ ಹುಟ್ಟು ಹಬ್ಬದ ಆಚರಣೆಯನ್ನು ಅದ್ಭುತವಾಗಿ ಏರ್ಪಡಿಸಿದ ಉಭಯ ಶಾಲೆಗಳ ಶಿಕ್ಷಕರು ಮತ್ತು ವಿದ್ಯಾರ್ಥಿಗಳನ್ನು ಶಾಲಾ ಸಂಚಾಲಕರು ಆಶೀರ್ವದಿಸಿದರು. ಸಹ ಶಿಕ್ಷಕಿಯರಾದ ಶ್ರೀಮತಿ ಎಲ್ವಿಟಾ ಸ್ವಾಗತಿಸಿ, ಶ್ರೀಮತಿ ಅನಿತಾ ವಂದಿಸಿ, ಶ್ರೀಮತಿ ಬ್ಲೆಂಡಿನ್ ರೋಡ್ರಿಗಸ್ ಕಾರ್ಯಕ್ರಮ ನಿರ್ವಹಿಸಿದರು.